ಕ್ಯಾನ್ಬೆರಾ: ಸಾಮಾನ್ಯವಾಗಿ ಎರಡು ಕಣ್ಣಿನ ಹಾವನ್ನ ನೋಡಿರುತ್ತೀರಾ. ಅದ್ರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೂರು ಕಣ್ಣಿನ ಹಾವೊಂದು ಸಖತ್ ಸದ್ದು ಮಾಡುತ್ತಿದೆ.
ಹೌದು. ಸಹಜವಾಗಿ ಹಾವುಗಳೆಂದರೆ ಎರಡು ಕಣ್ಣು ಇರುತ್ತೆ. ಆದರೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ. ಬುಧವಾರ ಈ ಬಗ್ಗೆ ಆಸ್ಟ್ರೇಲಿಯಾ ಉತ್ತರ ಭಾಗದ ಅರಣ್ಯ ಇಲಾಖೆ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಮೂರು ಕಣ್ಣಿನ ಹಾವಿನ ಫೋಟೋ ಜೊತೆಗೆ ಅದರ ವಿಶೇಷತೆಯನ್ನು ಶೇರ್ ಮಾಡಿದೆ. ಈ ಮೂರು ಕಣ್ಣಿನ ಹಾವಿನ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
Advertisement
Advertisement
ಅರ್ನ್ ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವು ಕಾರ್ಪೆಟ್ ಪೈತಾನ್ ಪ್ರಜಾತಿಗೆ ಸೇರಿದ್ದು, ಇದಕ್ಕೆ `ಮಾಂಟಿ ಪೈತಾನ್’ ಎಂದು ಹೆಸರಿಡಲಾಗಿದೆ. ಮಾರ್ಚ್ ನಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿತ್ತು. ಆದ್ರೆ ಹುಟ್ಟಿದ ಕೇವಲ ಮೂರೇ ತಿಂಗಳಲ್ಲಿ ಅದು ಸತ್ತು ಹೋಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಲ್ಲದೆ ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಆರೋಗ್ಯದ ಸಮಸ್ಯೆ ನಡುವೆಯೂ ಅದು ಮೂರು ತಿಂಗಳ ಕಾಲ ಬದುಕಿದ್ದೇ ಅಚ್ಚರಿಯ ಸಂಗತಿ. ಈ ಮೂರು ಕಣ್ಣಿನ ಹಾವು ಸುಮಾರು 40 ಸೆ.ಮಿ ಉದ್ದವಿತ್ತು ಎಂದಿದ್ದಾರೆ. ಹಾಗೆಯೇ ಈ ಹಾವಿನ ಎಕ್ಸ್-ರೆ ಮಾಡಿ ನೋಡಿದಾಗ ಹಾವಿಗೆ ಎರಡು ತಲೆಯಿಲ್ಲ ಎಂಬುದು ತಿಳಿದುಬಂದಿದೆ. ಆದ್ರೆ ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿದ್ದು, ಮೂರು ಕಣ್ಣು ಕೂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
https://www.facebook.com/ParksandWildlifeNT/posts/2284844224909161