ಕಾರ್ ಪಲ್ಟಿಯಾಗಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

Public TV
0 Min Read
gLB

ಕಲಬುರಗಿ: ಕಾರ್ ಪಲ್ಟಿಯಾಗಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

GLB ACCIDENT 5

ಕಲಬುರಗಿ ಹೊರವಲಯದ ಗೀತಾನಗರ ಬಳಿ ಇಂದು ನಸುಕಿನ ವೇಳೆ ಅಪಘಾತ ನಡೆದಿದ್ದು, ಕಲಬುರಗಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಶರಣಬಸಪ್ಪ(23), ಪ್ರತ್ಯಕ್ಷ (20), ಪ್ರತಿಭ್ (21) ಮೃತ ಎಂಜಿನಿಯರಿಂಗ್ ವಿದ್ಯಾರ್ಥಿಗಳು.

GLB ACCIDENT 3

ರಾತ್ರಿ ಪಾರ್ಟಿ ಮಾಡಿ ಬರುತ್ತಿರುವಾಗ ಈ ಅಪಘಾತ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಕುರಿತು ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GLB ACCIDENT 2

GLB ACCIDENT 6

GLB ACCIDENT 1

Share This Article
Leave a Comment

Leave a Reply

Your email address will not be published. Required fields are marked *