ರಾಯಚೂರು: ಜಿಲ್ಲೆಯಾದ್ಯಂತ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮೂವರನ್ನು ಬಲಿ ಪಡೆದಿದೆ. ಮಾನ್ವಿ ತಾಲೂಕಿನ ಕುರಡಿ ಗ್ರಾಮದಲ್ಲಿ ಸತತ ಮಳೆಗೆ ಮನೆ ಗೋಡೆ ಕುಸಿದು ಒಂದೇ ಮೂವರು ಸಾವನ್ನಪ್ಪಿದ್ದಾರೆ.
ಪರಮೇಶ (45) , ಪರಮೇಶ್ ಪತ್ನಿ ಜಯಮ್ಮ (39) ಹಾಗೂ ಪರಮೇಶನ ತಮ್ಮನ ಮಗ ನಾಲ್ಕು ವರ್ಷದ ಭರತ್ ಮೃತ ದುರ್ದೈವಿಗಳು. ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದು ಅವಘಡ ನಡೆದಿದೆ. ಪರಮೇಶ ಹಾಗೂ ಜಯಮ್ಮ ಸ್ಥಳದಲ್ಲೇ ಮೃತಪಟ್ಟರೆ, ಬಾಲಕ ಭರತ್ ಮಾನ್ವಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಸುದ್ದಿ – ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆ ಪೂಜೆ
Advertisement
Advertisement
ಘಟನೆ ಹಿನ್ನೆಲೆ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಮೂಲಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಸ್ಕಿ ತಾಲೂಕಿನ ಬಳಗಾನೂರಿನಲ್ಲಿ 60 ವರ್ಷದ ವೃದ್ಧ ಮರಿಯಪ್ಪ ಚಿನಿವಾಲ್ ಮನೆ ಕುಸಿತದಿಂದ ಸಾವನ್ನಪ್ಪಿದ್ದರು. ಇದನ್ನೂ ಓದಿ: ಕಲ್ಲು ತುಂಬಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ – ಬಸ್‌ನಲ್ಲಿದ್ದ ದಂಪತಿ ದುರ್ಮರಣ, 20 ಮಂದಿಗೆ ಗಾಯ