ChitradurgaDistrictsKarnatakaLatestMain Post

ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ – ಬೆಂಗಳೂರಿನ ಮೂವರು ದುರ್ಮರಣ

ಚಿತ್ರದುರ್ಗ: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಸೀಬಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಬೆಂಗಳೂರು ಮೂಲದ ಭೂಮಿಕಾ(22) ಸಿಂಚನ(24) ಮನೀಷ್(27) ಎಂದು ಗುರುತಿಸಲಾಗಿದೆ. ಘಟನೆ ವೇಳೆ ಮನೀಷ್, ಸಿಂಚನ ದಂಪತಿ, ಹಾಗೂ ಮನೀಷ್ ಸಹೋದರಿ ಭೂಮಿಕಾ ದುರ್ಮರಣ ಹೊಂದಿದ್ದಾರೆ. ಉಳಿದಂತೆ ಗಿರಿಧರ್, ಆಶಾ ಹಾಗೂ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಇದೀಗ ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶ ಹಬ್ಬ – ಪೊಲೀಸ್‌ ಇಲಾಖೆಯ ನಿಯಮಗಳೇನು?

ಬೆಂಗಳೂರಿಂದ ಶಿರಡಿ ಸಾಯಿಬಾಬ ದರ್ಶನಕ್ಕೆ ಐವರು ಸ್ನೇಹಿತರು ತೆರಳುತ್ತಿದ್ದರು. ಆದರೆ ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿ – ಡೈಮಂಡ್‌ ಲೀಗ್‌ ಗೆದ್ದ ನೀರಜ್‌ ಚೋಪ್ರಾ

Live Tv

Leave a Reply

Your email address will not be published.

Back to top button