ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ದಾರುಣ ಸಾವು

Public TV
1 Min Read
MANDYA KRS 3 DEATH

ಮಂಡ್ಯ: ನೀರಿನಲ್ಲಿ ಆಟವಾಡುವ ವೇಳೆ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ನಡೆದಿದೆ.

ಹರೀಶ್, ನಂಜುಂಡ ಹಾಗೂ ಜ್ಯೋತಿ ಮೃತ ದುರ್ದೈವಿಗಳು. ಈ ಮೂವರು ಮೈಸೂರಿನ ಟ್ರಸ್ಟ್‌ವೊಂದರ ಸಿಬ್ಬಂದಿಯಾಗಿದ್ದು, ರಜೆ ಹಿನ್ನೆಲೆ 25 ಮಂದಿ ಸಿಬ್ಬಂದಿಯೊಂದಿಗೆ ಪ್ರವಾಸಕ್ಕೆಂದು ಕೆಆರ್‌ಎಸ್‌ಗೆ ಬಂದಿದ್ದರು. ಹಿನ್ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪ್ರಜ್ಞೆತಪ್ಪಿ ಬಿದ್ದ ಪತ್ನಿಯನ್ನು ನೇಣು ಬಿಗಿದು ಹತ್ಯೆಗೈದ ಪತಿ

ಘಟನೆಯ ಬಳಿಕ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಮೃತದೇಹ ಮೇಲೆತ್ತುವ ಕಾರ್ಯ ನಡೆಯುತ್ತಿದೆ. ಮೂವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

Share This Article