ರಾಯ್ಪುರ: ಛತ್ತೀಸ್‌ಗಢದ (Chhattisgarh) ಕೊಂಡಗಾಂವ್ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯದ (Kabaddi Match) ವೇಳೆ ಬಿರುಗಾಳಿ (Storm) ಬೀಸಿದ ಪರಿಣಾಮ ಟೆಂಟ್‌ಗೆ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ್ದಾರೆ.
ಕಬ್ಬಡಿ ಆಟಗಾರ ಸತೀಶ್ ನೇತಮ್, ಸ್ಥಳೀಯ ನಿವಾಸಿಗಳಾದ ಶ್ಯಾಮ್‌ಲಾಲ್ ನೇತಮ್ ಮತ್ತು ಸುನಿಲ್ ಶೋರಿ ಮೃತರೆಂದು ಗುರುತಿಸಲಾಗಿದೆ. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್; ಮಹಿಳೆಯ ಪತಿ, ಅತ್ತೆ ಬಂಧನ
ಶನಿವಾರ ರಾತ್ರಿ ಬಡೇರಾಜ್‌ಪುರ ಅಭಿವೃದ್ಧಿ ಬ್ಲಾಕ್‌ನ ರಾವಸ್ವಾಹಿ ಗ್ರಾಮದಲ್ಲಿ ಕಬಡ್ಡಿ ಪಂದ್ಯ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್
ಗ್ರಾಮದಲ್ಲಿ ಶನಿವಾರ ಕಬ್ಬಡಿ ಪಂದ್ಯವನ್ನು ಆಯೋಜಿಸಲಾಗಿತ್ತು. ಅಲ್ಲದೇ ಪ್ರೇಕ್ಷಕರಿಗಾಗಿ ಟೆಂಟ್ ಅನ್ನು ನಿರ್ಮಿಸಲಾಗಿತ್ತು. ಪಂದ್ಯ ನಡೆಯುತ್ತಿದ್ದ ವೇಳೆ ಹಠಾತ್ ಬಿರುಗಾಳಿ ಬೀಸಿದ ಪರಿಣಾಮ ಟೆಂಟ್‌ನ ಕಬ್ಬಿಣದ ಕಂಬಕ್ಕೆ 11-ಕೆವಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಸ್ಥಳೀಯರು ಗಾಯಗೊಂಡ ಆರು ಮಂದಿಯನ್ನು ವಿಶ್ರಾಂಪುರಿಯ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಮೂವರು ಸಾವನ್ನಪ್ಪಿದ್ದು, ಗಾಯಗೊಂಡ ಮೂವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.