ಬಾಗಲಕೋಟೆ: ಟಂಟಂ ಪಲ್ಟಿಯಾದ ಪರಿಣಾಮ ಶಿಕ್ಷಕಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿ ನಡೆದಿದೆ.
50 ವರ್ಷದ ಚಂದಪ್ಪ ಗಚ್ಚಣ್ವರ, 48 ವರ್ಷದ ಗಂಗಮ್ಮ ಗಾಣಿಗೆರ ಶಿಕ್ಷಕಿ ಹಾಗೂ 5 ವರ್ಷದ ಸನ್ನಿಧಿ ತಳವಾರ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು. ಟಂಟಂ ಆಲದಕಟ್ಟಿ ಗ್ರಾಮದಿಂದ ಬಾದಾಮಿ ಕಡೆಗೆ ಹೊರಟಿತ್ತು. ಈ ವೇಳೆ ಟಂಟಂ ತಗ್ಗು-ಗುಂಡಿಯಿದ್ದ ಕಾರಣ ಪಲ್ಟಿಯಾಗಿದೆ.
Advertisement
ಟಂಟಂ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಉಳಿದ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಬಾದಾಮಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಬಾದಾಮಿ ಬಿಇಓ ಹಾಗೂ ಪಿ.ಎಸ್ ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.