ಲಕ್ನೋ: ಇರುವೆಗಳು ಕಚ್ಚಿದ್ದರಿಂದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ (ಎನ್ಐಸಿಯು) ಮೂರು ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅಲ್ಲದೇ ವೈದ್ಯರು ನಮ್ಮ ಬಳಿ 6,500 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸುವ ಮೂಲಕ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್
Advertisement
Advertisement
ಕುಲ್ಪಹಾರ್ ತಹಸಿಲ್ ಪ್ರದೇಶದ ಮುಧರಿ ಗ್ರಾಮದ ನಿವಾಸಿ ಸುರೇಂದ್ರ ರೈಕ್ವಾರ್ ಅವರು ಮೇ 30 ರಂದು ತಮ್ಮ ಗರ್ಭಿಣಿ ಪತ್ನಿ ಸೀಮಾ ಅವರೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಈ ದಂಪತಿಗೆ ಗಂಡು ಮಗುವಿಗೆ ಜನಿಸಿತ್ತು. ಆದರೆ ನವಜಾತ ಶಿಶು ಅಸ್ವಸ್ಥಗೊಂಡ ಹಿನ್ನೆಲೆ ವೈದ್ಯರು ವಿಶೇಷ ನವಜಾತ ಶಿಶು ನಿಗಾ ಘಟಕಕ್ಕೆ ದಾಖಲಿಸಿದ್ದರು. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್
Advertisement
Advertisement
ವಾರ್ಡ್ ಬಹಳ ಕೊಳಕಾಗಿದ್ದು, ಇರುವೆಗಳಿರುವ ಬಗ್ಗೆ ಈ ಮುನ್ನವೇ ಸಿಬ್ಬಂದಿ ಹಾಗೂ ವೈದ್ಯರಿಗೆ ದೂರು ನೀಡಿದ್ದರೂ ಗಮನಹರಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ಡಿಎಂ ಸದರ್ ಜಿತೇಂದ್ರ ಕುಮಾರ್ ಅವರು, ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು(ಸಿಎಂಎಸ್) ತನಿಖೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ.