ಬೆಂಗಳೂರು: ಮೂರು ದಿನಗಳ ಕಾಲ ನಡೆಯಲಿರುವ ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ (Malleshwaram Kadalekayi Parishe) ಇಂದು ಅದ್ದೂರಿಯಾಗಿ ಚಾಲನೆ ಸಿಕ್ಕಿದೆ.
ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಅಂದ್ರೇ ಅದು ಬಸವನಗುಡಿ ಅನ್ನೋ ಹೆಸರಿದೆ. ಕಡೆ ಕಾರ್ತಿಕ ಸೋಮವಾರದಂದು ಬಸವನಗುಡಿಯ ಕಡಲೆಕಾಯಿ ಪರಿಷೆ ನಡೆಯೋದು ವಾಡಿಕೆ. ಬಸವನಗುಡಿ ಕಡಲೆಕಾಯಿ ಪರಿಷೆಗೆ ಮುನ್ನವೇ ಬೆಂಗಳೂರಿನ ಜನರಿಗೆ ಮಲ್ಲೇಶ್ವರಂ ಕಡಲೆಕಾಯಿ ಕೈ ಬಿಸಿ ಕರೆಯುತ್ತಿದೆ. ಹೌದು, ಮಲ್ಲೇಶ್ವರದ ಕಾಡು ಮಲ್ಲೇಶ್ವರ, ಗಂಗಮ್ಮ ದೇವಿ, ನರಸಿಂಹ ಸ್ವಾಮಿ, ಮತ್ತು ದಕ್ಷಿಣ ತೀರ್ಥ ದೇವಾಲಯಗಳಿರೋ ಜಾಗದಲ್ಲಿ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆಗೆ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದ್ದಾರೆ.ಇದನ್ನೂ ಓದಿ: ಮೊದಲ ಹಂತದ ಚುನಾವಣೆ ಬೆನ್ನಲ್ಲೇ ಬಿಹಾರ ಕಾಲೇಜ್ ಬಳಿ ರಾಶಿರಾಶಿ ವಿವಿಪ್ಯಾಟ್ ಸ್ಲಿಪ್ – ವಿಡಿಯೋ ವೈರಲ್
ಇದೇ ವೇಳೆ ಮುಜರಾಯಿ ಸಚಿವರು ಮಾತನಾಡಿ, ಬೆಂಗಳೂರಿನಲ್ಲಿ ಎರಡು ಕಡೆ ಕಡಲೆಕಾಯಿ ಪರಿಷೆ ನಡೆಯುತ್ತದೆ. ಮಲ್ಲೇಶ್ವರಂನಲ್ಲಿ ಇದು 9ನೇ ವರ್ಷದ ಪರಿಷೆ. ಪ್ಲಾಸ್ಟಿಕ್ ಮುಕ್ತ ಪರಿಷೆ ಮಾಡ್ತಿದ್ದಾರೆ. ಇನ್ನೂ ಬಸವನಗುಡಿಯಲ್ಲಿ ಇದೇ 17ರಿಂದ ಪರಿಷೆ ನಡೆಯುತ್ತದೆ. ಅದಕ್ಕೆ ಸಿಎಂ ಬಂದು ಚಾಲನೆ ನೀಡಲಿದ್ದಾರೆ. ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ಅನೇಕರ ಶ್ರಮ ಇದೆ. ಇದು ಬೆಂಗಳೂರಿನ ದೊಡ್ಡ ಜಾತ್ರೆ. ನಮ್ಮ ಮಕ್ಕಳಿಗೆ ಜಾತ್ರೆಯನ್ನ ತೋರಿಸೋದಕ್ಕೆ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಇನ್ನೂ ಮಲ್ಲೇಶ್ವರಂನಲ್ಲಿ ಶುರವಾಗಿರೋ ರೈತಸ್ನೇಹಿ ಕಡಲೆಕಾಯಿ ಪರಿಷೆಗೆ ಜನಜಾತ್ರೆಯೇ ಹರಿದು ಬಂದಿದೆ. ಮೊದಲ ದಿನವೇ ಕಡಲೇ ಕಾಯಿ ಪರಿಷೆಗೆ ಜನಸಾಗರವೇ ಹರಿದು ಬಂದಿತ್ತು, ಕಾಲಿಡಲು ಜಾಗವಿಲ್ಲದಂತೆ ಜನರು ಜಾತ್ರೆಗೆ ಬಂದು ಕಡಲೆಕಾಯಿ ಖರೀದಿಸಿ, ದೇವರ ದರ್ಶನ ಮಾಡಿ ಸಂಭ್ರಮಿಸಿದರು, ಇನ್ನು ಕೆಲವರು ಕಡಲೆಕಾಯಿ ಪರಿಷೆಯ ಅಂದವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು.ಇದನ್ನೂ ಓದಿ: ದೆಹಲಿ ರೋಹಿಣಿಯ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಸ್ಲಮ್‌ಗೆ ಬೆಂಕಿ – ಓರ್ವ ವ್ಯಕ್ತಿ ಸಾವು

