ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು (Newborn baby) ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಕಲಬುರಗಿ ಪೊಲೀಸರು (Kalaburagi Police) ಬಂಧಿಸಿದ್ದಾರೆ.
ಕಲಬುರಗಿಯ ಎಂಎಸ್‌ಕೆಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಮಕ್ಕಳ ಕಳ್ಳಿಯರನ್ನು ಬಂಧಿಸಲಾಗಿದೆ. ನಂತರ ಮಗುವನ್ನು ರಕ್ಷಿಸಿ ತಾಯಿ ಕಸ್ತೂರಿ ಅವರಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಕೋಲಾರ ಸಂಸದ – ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಮನವಿ
Advertisement
Advertisement
ಮಾರಾಟಕ್ಕಾಗಿ ಮಗು ಕಳ್ಳತನ ಮಾಡಿದ್ದ ಗ್ಯಾಂಗ್:
ಮೂವರು ಕಳ್ಳಿಯರ ಖತರ್ನಾಕ್ ಗ್ಯಾಂಗ್ ನವಜಾತಶಿಶುವನ್ನು ಮಾರಾಟಕ್ಕಾಗಿ ಕಿಡ್ನ್ಯಾಪ್ ಮಾಡಿತ್ತು. ಕಳ್ಳತನದ ಬಳಿಕ ಖೈರುನ್ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಅಕ್ಕ ಪಕ್ಕದ ನಿವಾಸಿಗಳಿಂದ ಮಗು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತು. ಕೂಡಲೇ ಎಚ್ಚೆತ್ತ ಪೊಲೀಸರು ಮಗುವನ್ನು ರಕ್ಷಿಸಿ, ಕಳ್ಳಿಯರನ್ನ ಬಂಧಿಸಿದ್ದಾರೆ. ಸದ್ಯ ಪ್ರಕರಣದ ಬಳಿಕ ಮಗು ಖರೀದಿಸಿದ ಆರೋಪಿ ಖೈರುನ್ ಎಸ್ಕೇಪ್ ಆಗಿದ್ದಾಳೆ, ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Advertisement
Advertisement
ನವಜಾತ ಶಿಶು ಪತ್ತೆ ಹಚ್ಚಿದ ಎಸಿಪಿ ಭೂತೇಗೌಡ, ಸಿಪಿಗಳಾದ ಸೋಮಲಿಂಗ್ ಕಿರದಳ್ಳಿ ರಾಘವೇಂದ್ರ ಭಜಂತ್ರಿ ತಂಡವನ್ನು ಪೊಲೀಸ್ ಆಯುಕ್ತರು ಪ್ರಸಂಶಿಸಿದ್ದಾರೆ. ಸದ್ಯ ಜಿಮ್ಸ್ ಆಸ್ಪತ್ರೆಯ ಎಸ್‌ಎನ್‌ಸಿಯು ಬ್ಲಾಕ್‌ನಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು – ಮಹಾಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಬೇಡಿಕೆ