Connect with us

Crime

ಆರೋಪಿಯನ್ನೇ ಅಪಹರಿಸಿ 1.5 ಕೋಟಿ ರೂ. ಬೇಡಿಕೆ ಇಟ್ಟ ಖತರ್ನಾಕ್ ಪೊಲೀಸರು

Published

on

ನವದೆಹಲಿ: ವಂಚನೆ ಆರೋಪದ ಮೇಲೆ ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲು ಹೋದ ಪೊಲೀಸರೇ ಆತನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ವಿಚಿತ್ರ ಪ್ರಕರಣವೊಂದು ದೆಹಲಿಯಲ್ಲಿ ಬುಧವಾರದಂದು ಬೆಳಕಿಗೆ ಬಂದಿದೆ.

ನಗರದ ರಣಹೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌  ಸುಬೆ ಸಿಂಗ್, ಮುಖ್ಯ ಪೇದೆ ಇಂಧು ಪಾವಟ್, ಪೇದೆ ಅಜಯ್ ಕುಮಾರ್ ಅಪಹರಣ ಮಾಡಿದ ಪೊಲೀಸರು. ಚಂಡೀಗಢದಲ್ಲಿ ಆರು ಜನರ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಧಾನ್ ಎಂಬ ಆರೋಪಿ ಪರಾರಿಯಾಗಿದ್ದನು.

ದೆಹಲಿಯಲ್ಲಿ ತಲೆಮರಿಸಿಕೊಂಡಿದ್ದ ಆರೋಪಿ ಪ್ರಧಾನ್‍ನನ್ನು ಪತ್ತೆ ಹಚ್ಚಿದ ರಣಹೋಲಾ ಠಾಣೆಯ ಮೂವರು ಪೊಲೀಸರು, ಆತನನ್ನು ಬಂಧಿಸುವ ಬದಲು ಅಪಹರಿಸಿ ಉತ್ತಮ್‍ನಗರದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಬಳಿಕ ಆರೋಪಿಯ ಪತ್ನಿಗೆ ಕರೆ ಮಾಡಿ 1.5 ಕೋಟಿ ರೂ. ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದರೆ ಪ್ರಧಾನ್ ಮೇಲೆ ಈಗಾಗಲೇ ಇರುವ ವಂಚನೆ ಪ್ರಕರಣದ ಜೊತೆಗೆ ಸುಳ್ಳು ಕೇಸ್‍ಗಳನ್ನು ಹಾಕುವುದಾಗಿ ಬೆದರಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಅಪಹರಿಸಿರುವ ಮಾಹಿತಿ ಹಿರಿಯಾ ಪೊಲೀಸ್ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಅಪಹರಣದಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸರನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸಿದ್ದಾರೆ.

ಈ ಘಟನೆ ಕುರಿತು ದೆಹಲಿಯ ರಣಹೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *