ವಿಜಯಪುರ: ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದೆ. ಓರ್ವ ಬಾಲಕ ಹಾಗೂ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ.
ವಿಜಯಪುರ (Vijayapura) ತಾಲೂಕಿನ ಮಿಂಚನಾಳ ತಾಂಡಾದ ಮಾದೇವ ನಗರದಲ್ಲಿ ಘಟನೆ ನಡೆದಿದೆ. ಶಿವಮ್ಮ ರಾಜೂ ರಾಠೋಡ್ (8), ಕಾರ್ತಿಕ ವಿಶ್ವಾ ರಾಠೋಡ್ (7) ಹಾಗೂ ಸ್ವಪ್ನಾ ರಾಜೂ ರಾಠೋಡ್ (12) ಮೃತ ಮಕ್ಕಳಾಗಿದ್ದಾರೆ. ಇದನ್ನೂ ಓದಿ: ಹಾರಿ ಬಂದು ಹೊಟ್ಟೆಗೆ ಚುಚ್ಚಿದ ಮೀನು – ಮೀನುಗಾರಿಕೆಗೆ ತೆರಳಿದ್ದ ಯುವಕ ದುರ್ಮರಣ
ಕುರಿಗಳ ಜೊತೆಗೆ ಆಟವಾಡುತ್ತಾ ಕೃಷಿ ಹೊಂಡದ ಬಳಿ ಮಕ್ಕಳು ತೆರಳಿದ್ದರು. ಆಟವಾಡೋ ವೇಳೆ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ವಿಜಯಪುರ ತಹಶಿಲ್ದಾರ ಚೆನಗೊಂಡ ಹಾಗೂ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.