ಕೋಲಾರ: ಮೂರು ಕಾರುಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ (Series Accident) ಬೆಂಗಳೂರು ಮೂಲದ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಕೋಲಾರ (Kolara) ತಾಲೂಕಿನ ನರಸಾಪುರ ಬಳಿಯ ಬೆಳ್ಳೂರು ಬ್ರಿಡ್ಜ್ ನಡೆದಿದೆ.
ಬೆಂಗಳೂರಿನ ಆರ್.ಟಿ ನಗರದ (Bengaluru RT Nagara) ನಿವಾಸಿ ಅಫ್ರೋಜ್ ಮೃತ ದುರ್ದೈವಿ. ಬೆಳ್ಳೂರು ಗೇಟ್ ಬಳಿಯ ಚೆನ್ನೈ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಇಂಡಿಕಾ, ಫಾರ್ಚುನರ್ ಹಾಗೂ ಪೊಲೋ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಇದನ್ನೂ ಓದಿ: Pahalgam Attack | AK-47, M4 ರೈಫಲ್ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು
ಈ ವೇಳೆ ಪೊಲೋ ಕಾರಿನಲ್ಲಿದ್ದ ಬೆಂಗಳೂರು ಆರ್.ಟಿ ನಗರದ ನಿವಾಸಿ ಅಫ್ರೂಜ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಅಫ್ರೂಜ್ ಮುಳಬಾಗಿಲಿನ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದರು. ಇನ್ನೂ ಘಟನೆಯಲ್ಲಿ ಗಾಯಗೊಂಡ ಐವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಬಾರ್‌ನಲ್ಲಿ ಸೈಲೆನ್ಸ್ ಎಂದವನ ಕೊಲೆ – ನಾಲ್ವರ ಬಂಧನ
ಸ್ಥಳಕ್ಕೆ ವೇಮಗಲ್ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರು | ಸಿಡಿಲು ಬಡಿದು ವ್ಯಕ್ತಿ ಸಾವು – ಆಲಿಕಲ್ಲು ಮಳೆಗೆ ಕೋಟ್ಯಂತರ ರೂ. ಮೌಲ್ಯದ ಭತ್ತ ಹಾನಿ