ತುಮಕೂರು: ಬಾಣಾವರ (Banavar) ಗೇಟ್ ಬಳಿ ಇಂದು (ಫೆ.8) ಸಂಜೆ ಮೂರು ಕಾರುಗಳ (Car) ಮಧ್ಯೆ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ.
ನಗರದ ಯಾದವ ನಗರದ ಸುರೇಶ್ (55), ಮುರಳಿ (60) ಮೃತರು. ಸುರೇಶ್ ಗುಬ್ಬಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಅಪಘಾತದಲ್ಲಿ ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣಪ್ಪ, ಜೆಡಿಎಸ್ ವಕ್ತಾರ ಜಯಣ್ಣ, ಮಂಜುನಾಥ್ ಸೇರಿದಂತೆ 5 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಕೃಷ್ಣಪ್ಪ ಸ್ನೇಹಿತರ ಜತೆಗೆ ಆದಿಚುಂಚನಗಿರಿಗೆ ಹೋಗಿ ಕುಣಿಗಲ್ ಮಾರ್ಗವಾಗಿ ವಾಪಸ್ ಆಗುತ್ತಿದ್ದರು. ಇದೇ ವೇಳೆ ತುಮಕೂರು ಕಡೆಯಿಂದ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎದುರುಗಡೆ ಬರುತ್ತಿದ್ದ ರಾಮಕೃಷ್ಣಪ್ಪ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ಕಾರಿನಲ್ಲಿದ್ದ ಸುರೇಶ್, ಮುರಳಿ ಮೃತಪಟ್ಟಿದ್ದಾರೆ.
ಈ ಸಂಬಂಧ ಹೆಬ್ಬರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

