ಬೆಂಗಳೂರು: ಅಪರಾಧ ಪ್ರಕರಣಗಳ ಇತ್ಯರ್ಥಕ್ಕೆ ಹಣ ಬೇಕೆಂದು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳನ್ನು ಸಿ.ಕೆ.ಅಚ್ವುಕಟ್ಟು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಸೇರಿ ಮೂವರು ಜೈಲು ಪಾಲಾಗಿದ್ದಾರೆ.
ಅರುಣ್ ಅಲಿಯಾಸ್ ಸುನಾಮಿ, ಕಿರಣ್ ಕುಮಾರ್, ಸೋಮಶೇಖರ್ ಬಂಧಿತ ಆರೋಪಿಗಳು. ಆಗಸ್ಟ್ 31 ರ ಬೆಳಗಿನ ಜಾವ 2:30 ರ ವೇಳೆಗೆ ಸಂದೀಪ್ ಕುಮಾರ್ ಎಂಬಾತನ ಕಿಡ್ನ್ಯಾಪ್ ಮಾಡಲಾಗಿತ್ತು. ಇದನ್ನೂ ಓದಿ: ದೇವದುರ್ಗ ಉಪಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಬಂಧನ
Advertisement
Advertisement
ಬೆಂಗಳೂರಿನ ಇಟ್ಟಮಡುವಿನಿಂದ ಕಿಡ್ನ್ಯಾಪ್ ಮಾಡಿ ತಮಿಳುನಾಡಿಗೆ ಕರೆದೊಯ್ಯಲಾಗಿತ್ತು. ತಮಿಳುನಾಡಿನ ಡೆಂಕಣಿ ಕೋಣೆ ಫಾರಂ ಹೌಸ್‌ನಲ್ಲಿಟ್ಟು 50 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು.
Advertisement
ಮರುದಿನ ಮತ್ತೊಂದು ಜಾಗಕ್ಕೆ ಶಿಫ್ಟ್ ಮಾಡುವ ವೇಳೆ ಅಪಹರಣಕಾರರಿಂದ ಯುವಕ ತಪ್ಪಿಸಿಕೊಂಡಿದ್ದ. ತಮಿಳುನಾಡಿನ ಅಚ್ಚಿತಾ ಪೊಲೀಸರ ಸಹಾಯ ಪಡೆದು ಬೆಂಗಳೂರಿಗೆ ಮರಳಿದ್ದ. ಸಂದೀಪ್ ದೂರಿನ ಹಿನ್ನೆಲೆ ನಾಲ್ವರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಇದನ್ನೂ ಓದಿ: ಕಾರವಾರ ಕಡಲ ತೀರಕ್ಕೆ ತೇಲಿಬಂದ ನೀಲಿ ತಿಮಿಂಗಿಲದ ಮೃತದೇಹ!
Advertisement
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳು ಬಂಧಿತರಾಗಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರಿಂದ ತಲಾಶ್ ನಡೆಸುತ್ತಿದ್ದಾರೆ.
Web Stories