ಬೆಂಗಳೂರು: ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್ (Deadly Wheeling) ಮಾಡುತ್ತಿದ್ದ ಯುವಕರಿಗೆ ಸಂಚಾರಿ ಪೊಲೀಸರು (Traffic Police) ಚಳಿ ಬಿಡಿಸಿದ್ದಾರೆ.
ಮೂವರನ್ನು ಬಂಧಿಸಿದ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಗಾಡಿಯನ್ನು ಜಪ್ತಿ ಮಾಡಿ ಪೋಷಕರಿಗೆ 25 ಸಾವಿರ ರೂ. ದಂಡ (Fine) ವಿಧಿಸಿದ್ದಾರೆ. ಇದನ್ನೂ ಓದಿ: World Cup Semifinal: ಸಿಕ್ಸರ್ನಿಂದಲೇ ವಿಶ್ವದಾಖಲೆ ನಿರ್ಮಿಸಿದ ಹಿಟ್ಮ್ಯಾನ್
Advertisement
ವೀಲ್ಹಿಂಗ್ ಮಾಡುವಾಗ ದೆವ್ವದ ಮುಖವಾಡ ಧರಿಸುತ್ತಿದ್ದ ಇವರು ʼಡೆವಿಲ್ಸ್ ಆನ್ ರೋಡ್ʼ ಎಂದು ತಮ್ಮನ್ನ ತಾವು ಕರೆದುಕೊಳ್ಳುತ್ತಿದ್ದರು. ಈಗ ಡೆಡ್ಲಿ ವೀಲ್ಹಿಂಗ್ ಮಾಡುತ್ತಿದ್ದ ವೀಲರ್ಸ್ಗಳ ವಿರುದ್ಧ 14 ಪ್ರಕರಣ ದಾಖಲಾಗಿದೆ.
Advertisement
ಬೈಕ್ಗಳನ್ನ (Bike) ವಶಕ್ಕೆ ಪಡೆದು ಅದರ ಬಿಡಿಭಾಗವನ್ನು ಪೊಲೀಸರು ತೆಗೆದಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳ ಪ್ರೊಫೈಲ್ ತೆರೆದು ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.