ಬೆಂಗಳೂರು: ಅಂತಾರಾಜ್ಯ ಅಡಿಕೆ ವ್ಯಾಪಾರಿಯ 1 ಕೋಟಿ ರೂ. ಹಣ ಕಳವು ಪ್ರಕರಣ ಆರೋಪಿಗಳ ಜಾಡು ಪತ್ತೆ ಹಚ್ಚಿದ ಉಪ್ಪಾರಪೇಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಾರು ಚಾಲಕ ಸಂತೋಷ್ ಸೇರಿ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅಂತಾರಾಜ್ಯ ಅಡಿಕೆ ವ್ಯಾಪಾರಿ ಹೆಚ್.ಎಸ್. ಉಮೇಶ್ ಅ.7 ರಂದು ಚಿತ್ರದುರ್ಗದಿಂದ ವಿವಿಧ ಜಿಲ್ಲೆಗಳ ಅಡಿಕೆ ಖರೀದಿಗೆ ಕಾರಿನಲ್ಲಿ 1 ಕೋಟಿ ರೂ. ಹಣ ತಂದಿದ್ದರು. ನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ 1 ಕೋಟಿ ರೂ. ಹಣವನ್ನು ಕಾರಿನ ಡಿಕ್ಕಿಯಲ್ಲಿ ತಂದಿದ್ದರು. ಊಟಕ್ಕೆಂದು ಗಾಂಧೀನಗರದ ಹೋಟೆಲ್ ಮುಂಭಾಗ ಕಾರು ನಿಲ್ಲಿಸಿದ್ದರು. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ
Advertisement
Advertisement
ನಂತರ ಚಂದ್ರಾಲೇಔಟ್, ದಾಬಸ್ ಪೇಟೆ ಬಳಿಯೂ ಕಾರು ನಿಲ್ಲಿಸಿದ್ದರು. ಸಂಜೆ 7:45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀನಗರಕ್ಕೆ ಬಂದಿದ್ದ ವೇಳೆ ಕಳವಾಗಿರಬಹುದು ಎಂದು ಶಂಕಿಸಲಾಗಿತ್ತು.
Advertisement
Advertisement
ಅಡಿಕೆ ವ್ಯಾಪಾರಿ ಉಮೇಶ್ ದೂರಿನ ಹಿನ್ನಲೆ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ಉಪ್ಪಾರಪೇಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: FDA ಪರೀಕ್ಷೆಯಲ್ಲಿ ಅಕ್ರಮ- 300 ಜನರ ಜೊತೆ ಡೀಲ್ ಕುದುರಿಸಿದ್ದ ಆರ್‌ಡಿ ಪಾಟೀಲ್
Web Stories