ರಾಯಚೂರು: ಗಾಂಜಾ ಚಾಕೊಲೇಟ್ (Cannabis Chocolate) ದಂಧೆ ಭೇದಿಸಿದಷ್ಟು ಬಯಲಾಗುತ್ತಿದೆ. ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಕಡೆ ಪೊಲೀಸ್ ದಾಳಿ ಹಿನ್ನೆಲೆ ಎರಡು ಪ್ರಕರಣಗಳು ದಾಖಲಾಗಿದ್ದು, ರಾಯಚೂರು (Raichuru) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಗಾಂಜಾ ಚಾಕೊಲೇಟ್ ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ ಎಂದು ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಮಗುವನ್ನು ನೋಡಲೆಂದು ಪತ್ನಿ ಮನೆಗೆ ಹೋದಾಗ ಹಲ್ಲೆಗೈದು ಹಲ್ಲು ಕಿತ್ತ ಮಾವ!
Advertisement
Advertisement
ಎರಡು ಪ್ರಕರಣಗಳಿಂದ 7 ಕೆಜಿ ಮೌಲ್ಯದ 1,410 ಗಾಂಜಾ ಚಾಕೊಲೇಟ್‌ಗಳನ್ನ ಜಪ್ತಿ ಮಾಡಲಾಗಿದೆ. ಬಿಹಹಾರ ಮೂಲದ ಕಿಂಗ್ ಪಿನ್ ಸಂದೀಪ್, ರಾಯಚೂರು ಮೂಲದ ಕಿಂಗ್ ಪಿನ್ ವಾಜೀದ್ ಹಾಗೂ ರಾಮಕೃಷ್ಣ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಿರಾಣಿ ಅಂಗಡಿಗಳು, ಹೋಟೆಲ್‌ಗಳು ಹಾಗೂ ಪಾನ್ ಶಾಪ್‌ಗಳಲ್ಲಿ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಸದರ್ ಬಜಾರ್ ಹಾಗೂ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
Advertisement
Advertisement
ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ ಮಾಡಲಾಗುತ್ತಿದ್ದು, ಅಪ್ರಾಪ್ತರಿಗೆ ಹೆಚ್ಚು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನೀರು ಅಥವಾ ಹಾಲಿನಲ್ಲಿ ಮಿಕ್ಸ್ ಮಾಡಿ ಚಾಕೊಲೇಟ್ ಸೇವನೆ ಮಾಡಲಾಗುತ್ತಿದೆ. ಅಕ್ರಮ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದ್ದು, ಪೋಷಕರು ಹಾಗೂ ಶಾಲಾ-ಕಾಲೇಜುಗಳು ಎಚ್ಚರಿಕೆ ವಹಿಸುವಂತೆ ಎಸ್‌ಪಿ ನಿಖಿಲ್ ಬಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ
Web Stories