ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ, ಅಪ್ರಾಪ್ತ ಬಾಲಕಿ ಜನ್ಮ ನೀಡಿದ್ದ ಮಗುವನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜ ಬಂಧನಕ್ಕೊಳಗಾದವರು.
ಕಳೆದ ಅಕ್ಟೋಬರ್ 17ರಂದು ಮಡಿಕೇರಿ (Madikeri) ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಇದನ್ನೂ ಓದಿ: Champions Trophy | ಪಾಕ್ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ
ಒಂದು ವಾರ ಕಳೆದ ನಂತರ ನವಜಾತ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಕೊಂದು ಹೂತಿಟ್ಟಿದ್ದ ಶಂಕೆ ವ್ಯಕ್ತವಾದಾಗ ಶಿಶು ಜನಿಸಿಯೇ ಇಲ್ಲ ಎಂದು ಅಜ್ಜಿ ವಾದಿಸಿದ್ದರು. ಆದರೆ ಗುಂಡಿಯಲ್ಲಿ ನವಜಾತ ಶಿಸುವಿನ ಮೃತದೇಹ ದೊರೆತಿದ್ದರಿಂದ ತನಿಖೆ ಮುಂದುವರೆದು ಅದರ ತಾಯಿ, ಅಜ್ಜಿ ಹಾಗೂ ಅಜ್ಜನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಂಚಕರ ಜಾಲಕ್ಕೆ ಬಿದ್ದು ಡಿಜಿಟಲ್ ಅರೆಸ್ಟ್ ಆಗಿ 10 ಕೋಟಿ ಕಳೆದುಕೊಂಡ ನಿವೃತ್ತ ಎಂಜಿನಿಯರ್
ತಾನು ಗರ್ಭಿಣಿ ಆಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಆರೋಪಿಸಿದ್ದಳು. ಹೀಗಾಗಿ ಬಾಲಕನ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿತ್ತು. ಆದರೆ ಶಿಶುವಿನ ಡಿಎಸ್ಎ ಪರೀಕ್ಷೆ ನಡೆಸುವಂತೆ ಆತನ ಪೋಷಕರು ಆಗ್ರಹಿಸಿದ್ದರು. ಇದೀಗ ತನಿಖೆ ಮಾಡುವ ಸಂದರ್ಭಗಳಲ್ಲಿ ಬಾಲಕಿಯ ಪೋಷಕರೇ ಮಗುವನ್ನು ಹತ್ಯೆ ಮಾಡಿರಬೇಕು ಎಂದು ಪೊಲೀಸರು ಅನುಮಾನಗೊಂಡು ಇದೀಗ ಅರೇಸ್ಟ್ ಮಾಡಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ