ತಲೆಬುರುಡೆ, ಅಸ್ಥಿಪಂಜರಗಳನ್ನಿಟ್ಟುಕೊಂಡು ಗ್ರಾಮಸ್ಥರಿಗೆ ಬೆದರಿಕೆ- ಆರೋಪಿ ಅರೆಸ್ಟ್

Public TV
1 Min Read
Bidadi Black Magic Case

ರಾಮನಗರ: ತಲೆಬುರುಡೆ ಹಾಗೂ ಅಸ್ಥಿಪಂಜರಗಳನ್ನಿಟ್ಟುಕೊಂಡು ಗ್ರಾಮಸ್ಥರಿಗೆ ಹೆದರಿಸುತ್ತಿದ್ದ ವ್ಯಕ್ತಿಯನ್ನು ಬಿಡದಿ ಪೊಲೀಸರು (Bidadi Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜೋಗೂರು ದೊಡ್ಡಿ ಗ್ರಾಮದ ಬಲರಾಮ್ ಎಂದು ಗುರುತಿಸಲಾಗಿದೆ. ಆರೋಪಿ ವಾಮಾಚಾರದ ಮೂಲಕ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ. ಪ್ರಶ್ನಿಸಿದರೆ ಗ್ರಾಮಸ್ಥರ ಮೇಲೆ ವಾಮಾಚಾರ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಸ ಹಾಕುವ ವಿಚಾರಕ್ಕೆ ಗಲಾಟೆ- ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ

ಆರೋಪಿ ತನ್ನ ತೋಟದ ಮನೆ ಹಾಗೂ ಗ್ರಾಮದ ಸ್ಮಶಾನದಲ್ಲಿ ಅಮವಾಸ್ಯೆಯಂದು ವಿಚಿತ್ರ ಪೂಜೆಗಳನ್ನು ಮಾಡಿ ಗ್ರಾಮಸ್ಥರನ್ನು ಭಯಪಡಿಸುತ್ತಿದ್ದ. ಇದೇ ರೀತಿ ಭಾನುವಾರ ಪೂಜೆ ಮಾಡಿ ವಾಪಸ್ ಆಗುತ್ತಿದ್ದ ವೇಳೆ ಗ್ರಾಮಸ್ಥರು ಆತನನ್ನು ಹಾಗೂ ಆತನ ಸಹೋದರ ರವಿ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

Share This Article