ಚಿಕ್ಕೋಡಿ: ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ (Pramod Muthalik) ಅವರಿಗೆ ಜೀವ ಬೆದರಿಕೆ ಕರೆಗಳು (Threatening Call) ಬರುತ್ತಿರುವ ಕುರಿತು ಸ್ವತಃ ಪ್ರಮೋದ್ ಮುತಾಲಿಕ್ ಅವರೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ನನಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇನೆ ಬೋ… ಮಗನೇ ಎಂದು ಹೀನಾಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ
Advertisement
Advertisement
ನನಗೆ 4-5 ಕಾಲ್‌ಗಳ ಮೂಲಕ ಬೆದರಿಕೆ ಕರೆಗಳು ಬಂದಿವೆ. ಉರ್ದು ಮಿಶ್ರಿತ ಮಂಗಳೂರು ಕನ್ನಡ ಭಾಷೆಯಲ್ಲಿ ಅತ್ಯಂತ ಕೆಟ್ಟದಾಗಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ನಂಬರ್‌ಗಳನ್ನು ಹುಕ್ಕೇರಿ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸಿದ್ದೇನೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
Advertisement
ಇಂತಹ ಬೆದರಿಕೆ ಕರೆಗಳು ನನಗೆ ಬಂದಿರುವುದು ಮೊದಲೇನಲ್ಲ. ಈ ರೀತಿ ಬೆದರಿಕೆ ಹಾಕುವುದನ್ನು ಬಿಡಿ, ನಾನು ಇದಕ್ಕೆಲ್ಲ ಹೆದರುವುದಿಲ್ಲ. 10-15 ವರ್ಷಗಳಿಂದ ಬೆದರಿಕೆ ಕರೆಗಳನ್ನು ಸ್ವೀಕಾರ ಮಾಡಿಕೊಂಡು ಸಂಘಟನೆಯನ್ನು ಮುನ್ನಡೆಸಿದ್ದೇನೆ. ಇಂತಹ ಕುಕೃತ್ಯವನ್ನು ಬಿಟ್ಟು ನ್ಯಾಯಯುತವಾಗಿ ಬದುಕುವುದನ್ನು ಕಲಿಯಿರಿ ಎಂದಿದ್ದಾರೆ. ಇದನ್ನೂ ಓದಿ: ಸಬ್ ರಿಜಿಸ್ಟರ್ ಕಚೇರಿ ಮೇಲೆ ಲೋಕಾ ದಾಳಿ – 7 ಗಂಟೆಗಳ ನಂತರ ಕಾರ್ಯಾಚರಣೆ ಅಂತ್ಯ