– ಪೇದೆ ಹೈಡ್ರಾಮಾಕ್ಕೆ ಹೆದರಿದ ಇನ್‌ಸ್ಪೆಕ್ಟರ್‌ಗೆ ಬಿಪಿ ಲೋ; ಆಸ್ಪತ್ರೆಗೆ ದಾಖಲು
ಬೆಳಗಾವಿ: ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸುವ ರೀತಿಯಲ್ಲಿ ಪೇದೆ ಹೈಡ್ರಾಮಾ ಮಾಡಿದ ಘಟನೆ ಬೆಳಗಾವಿ (Belagavi) ನಗರದ ಉದ್ಯಮಬಾಗ ಪೊಲೀಸ್ (Udyambag) ಠಾಣೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಪೇದೆಯನ್ನು ಮುದಕಪ್ಪ ಉದಗಟ್ಟಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲಿ ಹಿಮಾಚಲ ಸರ್ಕಾರ – ಜನರಿಗೆ ನೀಡಿದ್ದ ‘ಗ್ಯಾರಂಟಿ’ ವಾಪಸ್ ಅಭಿಯಾನ ಶುರು
ಎರಡು ದಿನ ರಜೆಗೆ ಹೋಗಿ ಬಂದಿದ್ದ ಪೇದೆ ಮುದಕಪ್ಪನಿಗೆ ಡ್ಯೂಟಿ ಬದಲಿಸಿದ್ದರು. ಇದನ್ನು ಪ್ರಶ್ನೆ ಮಾಡಿದಾಗ ಬೆಳಗ್ಗೆ ನಿಯೋಜಿಸಿದ್ದ ಜಾಗಕ್ಕೆ ಹೋಗಬೇಕು ಎಂದು ಸೂಚನೆ ನೀಡಿದ್ದರು. ಇದರಿಂದ ತಾನು ವಿಷ ಸೇವಿಸುತ್ತೇನೆಂದು ಹೇಳಿ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಚೇಂಬರ್‌ನಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿ ಬಿದ್ದು ಉರುಳಾಡಿದ್ದ. ತಕ್ಷಣವೇ ಆಸ್ಪತ್ರೆಗೆ ರವಾನಿಸಿ, ಆರೋಗ್ಯ ತಪಾಸಣೆ ಮಾಡಿದಾಗ ವೈದ್ಯರು ಯಾವುದೇ ವಿಷ ಸೇವಿಸಿಲ್ಲ ಎಂದು ಹೇಳಿದ್ದರು. ಬಳಿಕ ಮೇಲಾಧಿಕಾರಿಗಳು ಪೇದೆಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.
ಪೇದೆಯ ನಡೆಯಿಂದ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಅವರ ಬೀಪಿ ಲೋ ಆಗಿ ತಕ್ಷಣವೇ ಅವರನ್ನು ಯಳ್ಳೂರ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಖಡೇಬಜಾರ್ ಎಸಿಪಿ ಶೇಖರಪ್ಪ ಉದ್ಯಮಬಾಗ ಠಾಣೆಗೆ ಆಗಮಿಸಿದರು. ಠಾಣೆಯಲ್ಲಿರುವ ಸಿಬ್ಬಂದಿಯಿಂದ ಘಟನೆ ಕುರಿತು ಮಾಹಿತಿ ಪಡೆದರು. ಹೈಡ್ರಾಮಾ ಕುರಿತು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್‌ಗೆ ಮಾಹಿತಿ ನೀಡಿದರು.
ನ.28ರಂದು ಪೇದೆ ವಿಠ್ಠಲ್ ಮುನಿಹಾಳ ಎಂಬಾತ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟು ಹೋಗಿದ್ದ. ಡೆತ್‌ನೋಟ್‌ನಲ್ಲಿ ಸಿಪಿಐ ಕಿರುಕುಳ ನೀಡ್ತಿದ್ದಾರೆಂದು ಉಲ್ಲೇಖಿಸಿದ್ದ. ತಕ್ಷಣ ಆತನನ್ನು ಹುಡುಕಿ ಸಹೋದ್ಯೋಗಿಗಳು ಜೀವ ಉಳಿಸಿದ್ದರು.ಇದನ್ನೂ ಓದಿ: ನಮ್ಮ ಮೆಟ್ರೋ ‘ಯೆಲ್ಲೋ ಲೈನ್’ ಸೇವೆ ಆರಂಭ ಯಾವಾಗ?- ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ