ಮುಂಬೈ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದ್ದು, `ನೀನೂ ಮೂಸೆವಾಲಾನ ರೀತಿ ಕೊನೆಯಾಗುತ್ತೀಯ’ ಎಂದು ಅನಾಮಿಕ ಪತ್ರದಲ್ಲಿರುವುದಾಗಿ ವರದಿಯಾಗಿದೆ.
ಸಿನಿಮಾ ಬರಹಗಾರ, ನಿರ್ಮಾಪಕ ಸಲೀಂ ಖಾನ್ ಅವರು ಬೆಳಗಿನ ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ದಿನವೂ ಕುಳಿತುಕೊಳ್ಳುವ ಸ್ಥಳದ ಬಳಿ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಸಿಕ್ಕಿದೆ. ಈ ಸಂಬಂಧ ಪೊಲೀಸರು FIR ದಾಖಲಿಸಿದ್ದಾರೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ
ಕಾರಣವೇನು?: ಬಿಷ್ಣೋಯಿ ಸಮುದಾಯವು ಕೃಷ್ಣಮೃಗವನ್ನು ಪೂಜನೀಯವಾಗಿ ಕಾಣುತ್ತದೆ. ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ಸಲ್ಮಾನ್‌ಗೆ ಜೋಧಪುರದಲ್ಲಿ ಕೊಲೆ ಬೆದರಿಕೆ ಹಾಕಲಾಗಿತ್ತು. ಲಾರೆನ್ಸ್ ಬಿಷ್ಣೋಯಿ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿ ಎನ್ನಲಾಗಿದೆ.
ಮೂಸೆವಾಲಾ ಹತ್ಯೆಯ ಬೆನ್ನಲ್ಲೇ ಸಲ್ಮಾನ್ ಖಾನ್ ಅವರಿಗೆ ಭದ್ರತೆ ನೀಡಲಾಗಿದೆ. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ಸ್ ಸುತ್ತಲೂ ಭದ್ರತೆ ಹೆಚ್ಚಿಸುವ ಸಾಧ್ಯತೆ ಇರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್
ಕಳೆದವಾರ ಪಂಜಾಬ್‌ನ ಮಾನ್ಸಾ ಗ್ರಾಮದಲ್ಲಿ ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಅದೇ ಗ್ಯಾಂಗ್ 2018ರಲ್ಲಿ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದೆ.