CrimeLatestMain PostNational

ಮುಖೇಶ್ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಬಿಹಾರ (Bihar) ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ದರ್ಭಾಂಗಾ ನಿವಾಸಿ ರಾಕೇಶ್ ಮಿಶ್ರಾ ಬಂಧಿತ ಆರೋಪಿಯಾಗಿದ್ದು, ಈತ ನಿರುದ್ಯೋಗಿಯಾಗಿದ್ದ. ಘಟನೆಗೆ ಸಂಬಂಧಿಸಿ ರಾಕೇಶ್ ಮಿಶ್ರಾನನ್ನು ಪೊಲೀಸರ (Police) ತಂಡ ಬಿಹಾರದಿಂದ ಮುಂಬೈಗೆ ಕರೆ ತರುತ್ತಿದ್ದಾರೆ.

ಮುಂಬೈನಲ್ಲಿರುವ ಸರ್ ಎಚ್‍ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬಾಂಬ್ ಹಾಕುವುದಾಗಿ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿತ್ತು. ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಕುಟುಂಬದ ಕೆಲ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆಯನ್ನು ಸ್ಫೋಟಿಸುತ್ತೇನೆ- ಮುಖೇಶ್ ಅಂಬಾನಿ, ಕುಟುಂಬಸ್ಥರಿಗೆ ಜೀವ ಬೆದರಿಕೆ

ಮುಕೇಶ್ ಅಂಬಾನಿ ಅವರ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದ ನಂತರ ತಕ್ಷಣ ಕಾರ್ಯೋನ್ಮುಖರಾದ ಮುಂಬೈ ಪೊಲೀಸರ ತಂಡ ಬಿಹಾರದ ಪೊಲೀಸರ ಸಹಾಯದಿಂದ ಮಧ್ಯರಾತ್ರಿ ಬಿಹಾರದ ದರ್ಭಾಂಗಾದಲ್ಲಿ ಆರೋಪಿ ರಾಕೇಶ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಾಳೆ ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ

ಇದಕ್ಕೂ ಮುನ್ನ ಆಗಸ್ಟ್ 15 ರಂದು ಎಚ್‍ಎನ್ ರಿಲಯನ್ಸ್ ಆಸ್ಪತ್ರೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಲಾಗಿತ್ತು. ಸುಮಾರು 8 ಬಾರಿ ಕರೆ ಮಾಡಿದ್ದವರನ್ನು ಡಿಬಿ ಮಾರ್ಗ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು. ಇದನ್ನೂ ಓದಿ: ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

Live Tv

Leave a Reply

Your email address will not be published. Required fields are marked *

Back to top button