ವಾಷಿಂಗ್ಟನ್: ಮೈಕ್ರೋಸಾಫ್ಟ್ ಕಾರ್ಪೊರೇಶನ್ನ ಎಂಎಸ್ ಟೀಮ್ಸ್ ಆ್ಯಪ್ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಅದನ್ನು ಗುರುವಾರ ಬೆಳಗ್ಗೆಯಿಂದ ಸಾವಿರಾರು ಬಳಕೆದಾರರು ಬಳಸಲು ಸಾಧ್ಯವಾಗುತ್ತಿಲ್ಲ.
ಮೈಕ್ರೊಸಾಫ್ಟ್ ಟೀಮ್ಸ್ ಅನ್ನು ವಿಶ್ವದಾದ್ಯಂತ ಸಾವಿರಾರು ಬಳಕೆದಾರರಿಗೆ ಪ್ರವೇಶಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗದೇ ನಿಲುಗಡೆ ಉಂಟಾಗಿದೆ. ಈ ಬಗ್ಗೆ ದೋಷವನ್ನು ಪತ್ತೆ ಹಚ್ಚಲಾಗುವುದು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ
Advertisement
Advertisement
ಮೈಕ್ರೋಸಾಫ್ಟ್ ಟೀಮ್ಸ್, ಕಂಪನಿ ಸ್ವಾಮ್ಯದ ಸಂವಹನ ವೇದಿಕೆಯಾಗಿದ್ದು, ಇದರಲ್ಲಿ ಬಳಕೆದಾರರು ಚ್ಯಾಟ್, ವೀಡಿಯೋ ಕಾನ್ಫರೆನ್ಸ್, ಫೈಲ್ಗಳ ಸಂಗ್ರಹಣೆಗಳನ್ನು ಮಾಡಬಹುದು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಗೆ ಬೆಂಕಿ ಹಚ್ಚಿಕೊಂಡ ಸಾಧು- ಗೆಹ್ಲೋಟ್ ಸರ್ಕಾರದ ವಿರುದ್ಧ ಆಕ್ರೋಶ
Advertisement
We’ve received reports of users being unable to access Microsoft Teams or leverage any features. We’re investigating the issue and further updates can be found in your Service Health Dashboard via TM402718.
— Microsoft 365 Status (@MSFT365Status) July 21, 2022
Advertisement
ಈ ಬಗ್ಗೆ ಮೈಕ್ರೋಸಾಫ್ಟ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ, ಬಳಕೆದಾರರು ಮೈಕ್ರೊಸಾಫ್ಟ್ ಟೀಮ್ಸ್ ಅನ್ನು ಪ್ರವೇಶಿಸಲು ಅಥವಾ ಯಾವುದೇ ಫೀಚರ್ಗಳನ್ನು ಹೋತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಪಡೆದಿದೆ. ಈ ಸಮಸ್ಯೆ ಬಗೆ ಹರಿಸಲಾಗುತ್ತದೆ ಎಂದು ತಿಳಿಸಿದೆ.