ವಿಶ್ವದ ಪ್ರತಿಷ್ಠಿತ ಕಾರು ಕಂಪೆನಿ ಟೆಸ್ಲಾ (Tesla Car) ‘ನಾಟು ನಾಟು’ (Natu Natu) ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ (Dance)ಮಾಡಿಸಿದೆ. ನಾಟು ನಾಟು ಹಾಡಿಗೆ ಕಾರುಗಳ ಲೈಟ್ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Advertisement
ಸಾವಿರಾರು ಕಾರುಗಳನ್ನು ಸಾಲು ಸಾಲಾಗಿ ನಿಲ್ಲಿಸಿ, ನಾಟು ನಾಟು ಹಾಡನ್ನು ಪ್ಲೇ ಮಾಡಲಾಗುತ್ತದೆ. ಕಾರಿನ ವಿಶೇಷ ಲೈಟ್ ಗಳು ಮ್ಯೂಸಿಕ್ ಗೆ ತಕ್ಕಂತೆ ಆಫ್ ಮತ್ತು ಆನ್ ಆಗುತ್ತವೆ. ಅದೊಂದು ರೀತಿಯಲ್ಲಿ ನೋಡುವುದಕ್ಕೆ ಹಬ್ಬದಂತೆ ಕಾಣುತ್ತದೆ. ಮ್ಯೂಸಿಕ್ ತಾಳಕ್ಕೆ ಸಖತ್ತಾಗಿಯೇ ಕಾರುಗಳು ಡಾನ್ಸ್ ಮಾಡುತ್ತವೆ.
Advertisement
.@Teslalightshows light sync with the beats of #Oscar Winning Song #NaatuNaatu in New Jersey ????????
Thanks for all the love. #RRRMovie @Tesla @elonmusk pic.twitter.com/wCJIY4sTyr
— RRR Movie (@RRRMovie) March 20, 2023
Advertisement
ಈ ವಿಡಿಯೋವನ್ನು ಆರ್.ಆರ್.ಆರ್ ಟ್ವಿಟ್ಟರ್ ಖಾತೆಯಿಂದ ಶೇರ್ ಮಾಡಲಾಗಿದ್ದು, ಟೆಸ್ಲಾ ಕಂಪೆನಿಯ ಒಡೆಯ ಎಲನ್ ಮಸ್ಕ್ ಈ ವಿಡಿಯೋವನ್ನು ಮೆಚ್ಚಿದ್ದಾರೆ. ಹಾರ್ಟ್ ಸಿಂಬಲ್ ಹಾಕಿದ್ದಾರೆ. ಅಲ್ಲದೇ, ನಾಟು ನಾಟು ಹಾಡಿನ ಬಗ್ಗೆಯೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದು ಆಸ್ಕರ್ ಪ್ರಶಸ್ತಿಗಾಗಿ ನೀಡಿದ ಗೌರವ ಎಂದು ಹೇಳಿಕೊಂಡಿದ್ದಾರೆ.
Advertisement
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಆರ್.ಆರ್.ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ಟೆಸ್ಲಾ ಕಂಪೆನಿ ಸಖತ್ ಐಡ್ಯಾ ಮಾಡಿದೆ. ಕುಣಿಯುವ ಲೈಟ್ ಮೂಲಕ ಗೌರವವನ್ನು ಸೂಚಿಸಿದೆ. ಈ ವಿಡಿಯೋಗೆ ಭಾರೀ ಲೈಕ್ಸ್ ಮತ್ತು ಕಾಮೆಂಟ್ ಕೂಡ ಬರುತ್ತಿವೆ.