ರಾಮನಗರ: ಕುಮಾರಸ್ವಾಮಿ (HD Kumaraswamy) ಆಡಳಿತದ ಅದ್ವಾನದಿಂದ ಸಾವಿರಾರು ಜನ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸುವವರು ಯಾರು ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಪ್ರಶ್ನಿಸಿದ್ದಾರೆ.
ನಿಖಿಲ್ (Nikhil Kumaraswamy) ಕಣ್ಣೀರಿಗೆ ಕಾಂಗ್ರೆಸ್ (Congress) ನಾಯಕರು ಕಾರಣ ಎಂಬ ವಿಚಾರದ ಕುರಿತು ಚನ್ನಪಟ್ಟಣದ ಕನ್ನಸಂದ್ರ ಗ್ರಾಮದಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿಗೂ ಚನ್ನಪಟ್ಟಣಕ್ಕೂ ಏನು ಸಂಬಂಧ ಇಲ್ಲ. ಅವರು ಇಲ್ಲಿ ಕಣ್ಣೀರು ಹಾಕಲು ಕಾರಣವೇ ಇಲ್ಲ. ಕಣ್ಣೀರು ಹಾಕೋದು ಅವರ ವಂಶಪಾರಂಪರ್ಯವಾಗಿ ಬಂದಿದೆ ಎಂದರು. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಕಾರ್ಮಿಕರ ಮೇಲೆ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹತ್ಯೆಗೈದ ಸೇನೆ
Advertisement
Advertisement
ಯೋಗೇಶ್ವರ್ ಬಿಜೆಪಿಗೆ ಮೋಸ ಮಾಡಿದ್ದಾರೆಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ ಜನ ನನ್ನನ್ನು ಬೆಂಬಲಿಸುತ್ತಾರೆ. ಚುನಾವಣೆ ಅಂದಮೇಲೆ ಪ್ರಚಾರ-ಅಪಪ್ರಚಾರ ಸಾಮಾನ್ಯ. ನಾನು ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದೆ. ಕುಮಾರಸ್ವಾಮಿ ಮಗನನ್ನು ಪ್ರತಿಷ್ಠಾಪನೆ ಮಾಡಬೇಕಿತ್ತು. ಹಾಗಾಗಿ ಕೊನೆಯವರೆಗೂ ಆಟ ಆಡಿಸಿದರು. ವಂಶಪಾರಂಪರ್ಯ, ಕುಟುಂಬ ರಾಜಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ. ಇದು ಜೆಡಿಎಸ್‌ನವರಿಗೂ ಸಹ ಗೊತ್ತಿದೆ. ಸ್ಥಳೀಯ ಜೆಡಿಎಸ್‌ನವರು ಸಹ ನನಗೆ ಟಿಕೆಟ್ ಕೊಡಿ ಎಂದಿದ್ದರು. ಕೊನೆಗೂ ಕುಮಾರಸ್ವಾಮಿ ಅವರ ಪ್ಲ್ಯಾನ್ ಸಕ್ಸಸ್ ಮಾಡಿಕೊಂಡರು ಎಂದು ಕಿಡಿಕಾರಿದರು. ಇದನ್ನೂ ಓದಿ: Haryana | ಐಎನ್‌ಎಲ್‌ಡಿಯ ದೀಪಾವಳಿ ಸಮಾರಂಭದಲ್ಲಿ ಪಾಕಿಸ್ತಾನ ಸಂಸದ ಅಬ್ದುಲ್ ರೆಹಮಾನ್ ಭಾಗಿ
Advertisement
Advertisement
ಕ್ಷೇತ್ರದಲ್ಲಿ ಪ್ರಚಾರಕ್ಕೆ ನ.4ಕ್ಕೆ ಡಿಸಿಎಂ ಬರುತ್ತಾರೆ ಹಾಗೂ ನ.6ಕ್ಕೆ ಸಿಎಂ ಬರುತ್ತಾರೆ. ನ.11ಕ್ಕೆ ಬೃಹತ್ ಬಹಿರಂಗ ಸಭೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. ಈ ಮೂಲಕ ಪ್ರಚಾರ ಕಾರ್ಯ ಮತ್ತಷ್ಟು ತೀವ್ರ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ