ಚಿಕ್ಕಬಳ್ಳಾಪುರ: ಟೊಮೆಟೋ ಬೆಲೆ ದುಬಾರಿಯಾಗಿದ್ದೇ ತಡ ರೈತ ಕಷ್ಟಪಟ್ಟು ತೋಟದಲ್ಲಿ ಬೆಳೆದಿದ್ದ ಟೊಮೆಟೋಗಳನ್ನ ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ರೈತ ಅನಂದ್ ತೋಟದಲ್ಲಿ ಬೆಳೆದಿದ್ದ ನೂರಾರು ಕೆಜಿಗಳಷ್ಟು ಟೊಮೆಟೋಗಳನ್ನ ಖದೀಮರು ಕಳವು ಮಾಡಿದ್ದಾರೆ.
Advertisement
Advertisement
ಕೈಗೆ ಬಂದಿದ್ದ ಬೆಳೆಯನ್ನ ಅನಂದ್, ಪ್ಲಾಸ್ಟಿಕ್ ಕ್ರೇಟ್ ಬಾಕ್ಸ್‍ಗೆ ತುಂಬಿಸಿ ಮಾರ್ಕೆಟ್‍ಗೆ ಹಾಕೋದಕ್ಕೆ ನಿರ್ಧರಿಸಿದ್ರು. ಆದ್ರೆ ಮನೆಗೆ ಹೋಗಿ ಊಟ ಮಾಡಿಕೊಂಡು ತೋಟದ ಬಳಿ ವಾಪಾಸ್ ಬರುವಷ್ಟರಲ್ಲಿ ಕಳ್ಳರು ಟೊಮೆಟೋಗಳನ್ನು ಕದ್ದಿದ್ದಾರೆ. 64 ಕ್ರೇಟ್‍ನಲ್ಲಿದ್ದ ನೂರಾರು ಕೆಜಿ ಟೊಮೆಟೋಗಳನ್ನು ಕದ್ದು ಖಾಲಿ ಕ್ರೇಟ್‍ಗಳನ್ನ ಅಲ್ಲೇ ಬಿಸಾಡಿ ಹೋಗಿದ್ದಾರೆ.
Advertisement
ಮಾರುಕಟ್ಟೆಯಲ್ಲಿ ಈಗ ಒಂದು ಕೆಜಿ ಟೊಮೆಟೋಗೆ 80 ರಿಂದ 100 ರೂಪಾಯಿ ಬೆಲೆ ಇದೆ. ಒಂದು ಕ್ರೇಟ್ ಅಂದ್ರೆ 10 ಕೆಜಿಯ ಟೊಮೆಟೋ ಬಾಕ್ಸ್ ಗೆ 800 ರೂಪಾಯಿಯಿಂದ ಸಾವಿರ ಬೆಲೆ ಇದೆ. 64 ಕ್ರೇಟ್‍ನಲ್ಲಿದ್ದ ಟೊಮೆಟೋಗಳಿಗೆ ಸರಿ ಸುಮಾರು 65000 ಹಣ ಸಿಗುತ್ತಿತ್ತು. ಆದ್ರೆ ಸಾಲ ಸೋಲ ಮಾಡಿ, ಹನಿ ಹನಿ ನೀರುಣಿಸಿ ಕಷ್ಟಪಟ್ಟು ಬೆಳಸಿದ್ದ ಟೊಮೆಟೋ ಇದೀಗ ಕಳ್ಳರ ಪಾಲಾಗಿವೆ.
Advertisement
ಈ ಸಂಬಂಧ ರೈತ ಅನಂದ್ ಚಿಂತಾಮಣಿ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.