ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ 20 ರಿಂದ 30 ಸಾವಿರ ಕ್ಯೂಸೆಕ್ ನೀರು ಮಾಂಜ್ರಾನದಿಗೆ ಬಿಟ್ಟಿರುವ ಕಾರಣ ನದಿ ಉಕ್ಕಿ ಹರಿಯುತ್ತಿದೆ.
Advertisement
ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನದಿ ದಡದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆಯಲ್ಲಿ ಬೆಳೆದ್ದ ಬೆಳೆ ನಾಶವಾಗಿದೆ. ಸೋಯಾ, ಉದ್ದು, ಹೆಸರು, ತೊಗರಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಸರ್ವನಾಶವಾಗಿದೆ. ಇದನ್ನೂ ಓದಿ: ಕರಾವಳಿ, ಉತ್ತರ ಒಳನಾಡಿನಲ್ಲಿ ಅ.3ರವರೆಗೆ ಭಾರೀ ಮಳೆ
Advertisement
Advertisement
ಧನ್ನೆಗಾಂವ್ ಜಲಾಶಯದಿಂದ ನೀರು ಬಿಟ್ಟ ಪರಿಣಾಮದ ಜೊತೆಗೆ ಗುಲಾಬ್ ಚಂಡಮಾರುತ ಹಾಗೂ ಕಾರಂಜಾ ಜಲಾಶಯದಿಂದ ನೀರು ಬಿಡುಗಡೆಯಾಗಿದೆ. ಈ ಕಾರಣ ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಸಾವಿರಾರು ಎಕರೆ ಬೆಳೆಗಳು ನಾಶವಾಗಿದೆ. ಇದನ್ನೂ ಓದಿ: ಅನೈತಿಕ ಸರ್ಕಾರದಲ್ಲಿ ನೀವು ಪಾಪದ ನೀರಾವರಿ ಮಂತ್ರಿ: ಕಾರಜೋಳ ವಿರುದ್ಧ ಎಂಬಿಪಿ ಕಿಡಿ
Advertisement
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕ್ಷೇತ್ರದಲ್ಲೆ ರೈತರು ಮಾಂಜ್ರಾದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿ ಸಚಿವರು ಇನ್ನೂ ಸ್ಥಳಕ್ಕೆ ಬಾರದಕ್ಕೆ ಅವರ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.