ಮುಂಬೈ: ನಾನು ಎಷ್ಟೇ ಯೋಗ ಮಾಡಿದರೂ, ನನ್ನ ಕಣ್ಣೀರು ಮಾತ್ರ ನಿಂತಿರಲಿಲ್ಲ ಎಂದು ಮಲೈಕಾ ಅರೋರಾ ತನ್ನ ದುಃಖವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾಳೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಲುವಾಗಿ 47 ವರ್ಷದ ಬಾಲಿವುಟ್ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ತಾವು ಅನುಭವಿಸಿದ ಮಾನಸಿಕ ಹಿಂಸೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಲೈಕಾ ಇನ್‍ಸ್ಟಾಗ್ರಾಮ್ ನಲ್ಲಿ, ನಾಳೆ, ಅ.10 ವಿಶ್ವ ಮಾನಸಿಕ ಆರೋಗ್ಯ ದಿನ. ನನ್ನ ಮನಸ್ಸು ನನಗೆ ಗೊತ್ತಿಲ್ಲದೇ ನನ್ನೊಂದಿಗೆ ಆಟವಾಡಲು ಆರಂಭಿಸಿತು. ಯೋಗದಿಂದಾಗಿ ನಾನು ಬದುಕುಳಿದೆ ಎಂದು ತಮ್ಮ ‘ಬ್ರೇಕಿಂಗ್ ಪಾಯಿಂಟ್’ ಬಗ್ಗೆ ಬರೆದಿದ್ದಾರೆ. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ
Advertisement
View this post on Instagram
Advertisement
ನಾನು ಮೊದಲು ಕೆಲವು ಯೋಗ ತರಗತಿಯಲ್ಲಿದ್ದಾಗ, ಒಂದು ದಿನ ನನ್ನ ಬ್ರೇಕಿಂಗ್ ಪಾಯಿಂಟ್ ಬಂತು. ಏನೇ ಮಾಡಿದರು ನನ್ನ ಕಣ್ಣೀರು ನಿಲ್ಲಲಿಲ್ಲ. ನಾನು ನನ್ನೊಳಗೆ ಹಿಂಸೆಪಟ್ಟುಕೊಂಡು ಬದುಕುಳಿದೆ. ನಾನು ಎಂದಿಗೂ ನನ್ನನ್ನು ಬುಲೆಟ್ ಪ್ರೂಫ್ ಎಂದು ಕರೆಯುವುದಿಲ್ಲ. ಏಕೆಂದರೆ ನಮ್ಮಲ್ಲಿ ಯಾರೂ ಇಲ್ಲ. ನಾನು ಸ್ಥಿರವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಾಗಿರಲು ಬಯಸುವ ಹಾದಿಯಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತೇನೆ. ಇದು ನನ್ನ ಸರ್ವಸ್ವ. ನಿಮ್ಮ ಕಥೆಯನ್ನು ನಮಗೂ ತಿಳಿಸಿ, ನಾವು ಕೇಳುತ್ತೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
View this post on Instagram
Advertisement
ಈ ಮೂಲಕ ಮಲೈಕಾ ತಾವು ಅನುಭವಿಸಿದ ಹಿಂಸೆಯನ್ನು ಬಹಳ ನಾಜೂಕಾಗಿ ಹೇಳಿದ್ದು, ಇಲ್ಲಿ ಯಾರೂ ಬುಲೆಟ್ ಪ್ರೂಫ್ ಗಳಿಲ್ಲ. ಎಲ್ಲರಿಗೂ ಅವರದೇ ಆದ ಕಷ್ಟಗಳಿರುತ್ತವೆ. ಅದನ್ನು ನಾವು ಎದುರಿಸಿ ಬರಬೇಕು ಎಂದು ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ: ಬಟ್ಟೆ ಒಗೆಯುವುದನ್ನು ಹೇಳಿಕೊಡುತ್ತೆ ಚಿಂಪಾಂಜಿ- ವೀಡಿಯೋ ವೈರಲ್
ಮಲೈಕಾ ಅರೋರಾ ಅವರು ಟೆರೆನ್ಸ್ ಲೂಯಿಸ್ ಮತ್ತು ಗೀತಾ ಕಪೂರ್ ಜೊತೆಯಲ್ಲಿ ಖಾಸಗಿ ವಾಹಿನಿಯೊಂದರ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರಸ್ತುತ ಮಿಲಿಂದ್ ಸೋಮನ್ ಮತ್ತು ಅನುಷಾ ದಾಂಡೇಕರ್ ಅವರೊಂದಿಗೆ ಭಾರತದ ‘ನೆಕ್ಸ್ಟ್ ಟಾಪ್ ಮಾಡೆಲ್’ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಮಲೈಕಾ ಅರೋರಾ ಸೂಪರ್ ಡ್ಯಾನ್ಸ್ ಆಗಿದ್ದು, ಬಾಲಿವುಡ್ ನ ಚೈಯಾ ಚೈಯಾ, ಮುನ್ನಿ ಬದ್ನಾಮ್ ಹುಯಿ, ಅನಾರ್ಕಲಿ ಡಿಸ್ಕೋ ಚಲಿ ಮತ್ತು ಹಲೋ ಹಲೋ ಮುಂತಾದ ಸಾಂಗ್ ಗಳಲ್ಲಿ ಇವರ ಡ್ಯಾನ್ಸ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.