ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪಕ್ಕದಲ್ಲಿಯೇ ಕುಳಿತುಕೊಂಡು ಬಾಲಕಿಯೊಬ್ಬಳು ಬಿಜೆಪಿ (BJP) ಕುರಿತಂತೆ ಪದ್ಯವೊಂದನ್ನು ಹಾಡುತ್ತಾ, ಹೊಗಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಾಲಕಿ ಗುಜರಾತಿ ( Gujarati) ಭಾಷೆಯಲ್ಲಿ “ಬಿಜೆಪಿ ನಮ್ಮನ್ನು ಉಳಿಸುತ್ತಿದೆ, ಬಿಜೆಪಿ ಮತ್ತೆ ಬರುತ್ತದೆ ಎಂದು ಹೇಳಿರುವುದನ್ನು ಕೇಳಬಹುದಾಗಿದೆ.
Advertisement
ગુજરાતીઓ ના મન મસ્તીષ્ક પર છવાયો વિકાસ.
“અમને તો ફાવશે જ ભાજપ, ફરી આવશે જ ભાજપ..” #કમળ_સાથે_સમૃદ્ધ_ગુજરાત pic.twitter.com/hpVa9OSkyM
— BJP (@BJP4India) November 21, 2022
Advertisement
57 ಸೆಕೆಂಡ್‍ಗಳಿರುವ ಈ ವೀಡಿಯೋದಲ್ಲಿ, ಬಿಜೆಪಿ, ಬಿಜೆಪಿ, ಬಿಜೆಪಿ, ಎಲ್ಲಿ ನೋಡಿದರೂ ಬಿಜೆಪಿ, ಪ್ರತಿಯೊಂದು ಚರ್ಚೆಯೂ ಬಿಜೆಪಿಯಿಂದಲೇ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಬಿಜೆಪಿಯನ್ನು ಸೋಲಿಸಲು ಜನ ನಾನಾ ಆಟಗಳನ್ನು ಆಡುತ್ತಿದ್ದಾರೆ ಎಂದು ಗುಜರಾತಿ ಭಾಷೆಯಲ್ಲಿ ಬಾಲಕಿ ಪದ್ಯ ಹಾಡಲು ಶುರು ಮಾಡಿದ್ದಾಳೆ. ಬಿಜೆಪಿಯನ್ನು ಪದ್ಯದ ಮೂಲಕ ಹೊಗಳುವುದನ್ನು ಕೇಳಿದ ಮೋದಿ ಅವರು ಕೊನೆಗೆ ಬಾಲಕಿಗೆ ಶಭಾಶ್ ಎಂದು ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಪಂಪ್‌ವೇಲ್ ಫ್ಲೈ ಓವರ್ ಬಳಿ ಬಾಂಬ್ ಸ್ಟೋಟಿಸಲು ಮುಂದಾಗಿದ್ದ ಶಾರೀಕ್
Advertisement
Advertisement
ನಂತರ ಮೋದಿ ಅವರ ಪಕ್ಕದಲ್ಲಿ ಕುಳಿತುಕೊಂಡು ಪದ್ಯ ಹೇಳುವಾಗ ಭಯವಾಗಲಿಲ್ಲವೇ ಎಂಬ ಮಾಧ್ಯಮವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಕಿ, ನಾನು ಕೋಣೆಗೆ ಹೋಗುವ ಮೊದಲು ಭಯಗೊಂಡಿದ್ದೆ. ಆದರೆ ನಾನು ಪ್ರಧಾನಿ ಅವರ ಮುಂದೆ ಹೋದ ನಂತರ ಭಯಪಡಲಿಲ್ಲ. ಅವರು ನನ್ನ ಅಜ್ಜ ಎಂದು ನಾನು ಭಾವಿಸಿದೆ. ನನಗೆ ಆಟೋಗ್ರಾಫ್ ಬೇಕಾ ಅಥವಾ ಫೋಟೋ ಬೇಕಾ ಎಂದು ಅವರು ನನ್ನನ್ನು ಕೇಳಿದರು. ಆಗ ನನಗೆ ಎರಡೂ ಬೇಕು ಅಂತ ಹೇಳಿದೆ. ಆಗ ನಾನು ಧರಿಸಿದ್ದ ಬಿಜೆಪಿ ಕವಚಕ್ಕೆ ಶಾಲಿಗೆ ಸಹಿ ಹಾಕಿದರು. ಅಲ್ಲದೇ ನನ್ನ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡರು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ