ವಿಜಯಪುರ: ರಾಜ್ಯ ಸಾವಿನ ಮನೆಯಾಗಿದ್ದರೂ ಸರ್ಕಾರ ಸಂಬಂಧವಿಲ್ಲದ ರೀತಿಯಲ್ಲಿದೆ. ಜೊತೆಗೆ ಡಿನ್ನರ್ ಪಾರ್ಟಿ ನಡೆಸಿದ್ದಾರೆ ಎಂದು ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ರೈತರ ಆತ್ಮಹತ್ಯೆಗಳಾಗುತ್ತಿವೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಳುವ ಸರ್ಕಾರಕ್ಕೆ ಇದೆಲ್ಲ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ‘ಪುಷ್ಪ ಕಾ ಬಾಪ್’ ಎಂದು ಕೇಕ್ ಮೇಲೆ ಬರೆದು ತಂದೆಗೆ ವಿಶ್ ಮಾಡಿದ ಅಲ್ಲು ಅರ್ಜುನ್
Advertisement
Advertisement
ರೋಮ್ ದೇಶ ಹೊತ್ತಿ ಉರಿಯುವಾಗ ದೊರೆ ಪಿಟೀಲು ನುಡಿಸುತ್ತಿದ್ದನಂತೆ ಎಂಬ ಗಾದೆ ಮಾತಿನಂತೆ ರಾಜ್ಯ ಸಾವಿನ ಮನೆಯಾಗಿದ್ದರೂ ಸರ್ಕಾರ ಸಂಬಂಧವಿಲ್ಲದ ರೀತಿಯಲ್ಲಿದೆ. ಇವರು ಡಿನ್ನರ್ ಪಾರ್ಟಿ ನಡೆಸಿದ್ದಾರೆ. ಕರುಣೆ ಇದ್ದರೆ ಬಾಣಂತಿಯರ ಸಾವಿಗೆ ಕಾರಣ ಕಂಡುಕೊಳ್ಳಲಿ. ಸಾವಿನ ಸರಣಿ ಇನ್ನೂ ನಿಂತಿಲ್ಲ. ಸಾವುಗಳಿಗೆ ಆಸ್ಪತ್ರೆ, ಔಷಧ, ವೈದ್ಯರು ಯಾರು ಕಾರಣ ಎಂಬುವುದನ್ನು ಕಂಡು ಹಿಡಿಯಲಿ ಎಂದರು.
Advertisement
ಅತಿಮಾನುಷ ಶಕ್ತಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿಗೆ ಕಾರಣವಾ? ಔಷಧಿ ಕಾರಣವಾಗಿದ್ದರೆ ಪೂರೈಕೆದಾರರ ಮೇಲೆ ಕ್ರಮವಾಗಲಿ. ವೈದ್ಯರಾಗಿದ್ದರೆ ಅವರ ಮೇಲೂ ಕ್ರಮವಾಗಲಿ. ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಕಲ್ಲಿನ ಹೃದಯದವರಾಗಿದ್ದಾರೆ. ಬಾಣಂತಿಯರ ಸಾವಿನ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ಆಗಲಿ. ಸರ್ಕಾರದ ಸಚಿವರ ಮೇಲೆ ನಮಗೆ ನಂಬಿಕೆಯಿಲ್ಲ. ಎಕ್ಸ್ಪರ್ಟ್ ಕಮಿಟಿ ತನಿಖೆ ಮಾಡಲಿ ಎಂದು ಹೇಳಿದರು.ಇದನ್ನೂ ಓದಿ: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ ಅಂದ್ರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ – `ಕೈ’ ಡಿನ್ನರ್ ಮೀಟಿಂಗ್‌ಗೆ ಹೆಚ್‌ಡಿಕೆ ಕಿಡಿ
Advertisement