– ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆದಿದೆ
– ಬಿಜೆಪಿ ಬಡವರ ಸೇವೆಗೆ ಬದ್ಧ
ನವದೆಹಲಿ: ಹುಟ್ಟುತ್ತಲೇ ಬೆಳ್ಳಿ ಸ್ಪೂನ್ ಹಿಡಿದವರು, ಪಂಚತಾರಾ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡಜನರನ್ನು ಒಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ಪ್ರಧಾನಿ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ.
Advertisement
ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಮೋದಿ, ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಮತದಾರರು ಕಾಂಗ್ರೆಸ್‌ಗೆ ‘ನೋ ಎಂಟ್ರಿ’ ಬೋರ್ಡ್ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸತತ 3ನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ಇತಿಹಾಸ ಬರೆದಿದೆ: ಮೋದಿ ಸೆಲ್ಯೂಟ್
Advertisement
Advertisement
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಅಪರೂಪ. 13 ವರ್ಷಗಳ ಹಿಂದೆ ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. 60 ವರ್ಷಗಳಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದ ಕೆಲವು ರಾಜ್ಯಗಳಿವೆ ಎಂದು ಮೋದಿ ಕುಟುಕಿದ್ದಾರೆ.
Advertisement
ಹುಟ್ಟುತ್ತಲೇ ಬೆಳ್ಳಿ ಚಮಚ ಹಿಡಿದು, ಪಂಚತಾರಾ ಹೋಟೆಲ್‌ಗಳಲ್ಲಿ ಜೀವನ ನಡೆಸುತ್ತಿರುವವರು ಬಡವರು ಜಾತಿ ವಿಚಾರದಲ್ಲಿ ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ನಮ್ಮ ದಲಿತ ಸಮುದಾಯ ಇದನ್ನು ಮರೆಯಬಾರದು ಎಂದು ಪ್ರಧಾನಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್
ದಲಿತ ಓಬಿಸಿ ಮೀಸಲಾತಿ ಕಸಿದು ತನ್ನ ವೋಟ್‌ಬ್ಯಾಂಕ್‌ಗೆ ನೀಡಲು ಸಂಚು ಮಾಡಿತ್ತು. ಹರಿಯಾಣದಲ್ಲೂ ಇದನ್ನೇ ಮಾಡಲು ಹೊರಟಿದ್ದರು. ಕಾಂಗ್ರೆಸ್ ಅರಾಜಕತೆ ಸೃಷ್ಟಿಸಿ ದೇಶವನ್ನು ಬಲಹೀನಗೊಳಿಸುತ್ತದೆ. ನಮ್ಮ ಸೇನೆಯ ಬಗ್ಗೆಯೂ ಅಪಪ್ರಚಾರ ಮಾಡಿತು. ನಮ್ಮ ಯುವಕರೂ ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ದೇಶಭಕ್ತರನ್ನು ಒಡೆಯುವ ಕಾಂಗ್ರೆಸ್ ಪ್ರಯತ್ನವನ್ನು ಹರಿಯಾಣ ಜನರು ವಿಫಲಗೊಳಿಸಿದ್ದಾರೆ. ಭಾರತದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆದಿದೆ. ಕಾಂಗ್ರೆಸ್ ಸೇರಿದಂತೆ ಅದರ ಇತರೆ ಪಕ್ಷಗಳು ಇದರಲ್ಲಿ ಶಾಮೀಲಾಗಿವೆ. ನಾನು ಇದನ್ನು ಬಹಳಷ್ಟು ಜವಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾವು ಇಂತಹ ಕುತಂತ್ರ ಸಫಲವಾಗಲು ಬಿಟ್ಟಿಲ್ಲ. ಕಾಂಗ್ರೆಸ್ ಈಗ ಪರ ಜೀವಿ ಪಕ್ಷವಾಗಿದೆ. ಹರಿಯಾಣದಲ್ಲಿ ಒಂದೇಯಾಗಿತ್ತು, ಅದಕ್ಕೆ ಹೀನಾಯ ಸೋಲಾಯಿತು. ಜಮ್ಮು ಕಾಶ್ಮೀರದಲ್ಲಿ ಎನ್‌ಸಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್‌ನಿಂದ ನಷ್ಟವಾಗಿದೆ ಎಂದು ಈ ಹಿಂದೆ ಎನ್‌ಸಿ ಹೇಳಿತ್ತು. ಈಗ ಕಾಶ್ಮೀರದಲ್ಲಿ ಅದೇ ಆಗಿದೆ. ಯಾರು ಕಾಂಗ್ರೆಸ್ ಮೇಲೆ ಭರವಸೆ ಇಟ್ಟಿದ್ದರೋ, ಅವರ ದೋಣಿಯೇ ಮುಳುಗಿದೆ. ಬಿಜೆಪಿ ಸರ್ಕಾರ ಎರಡು ರಾಜ್ಯಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲಿದೆ. ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರೋಡ್ ಮ್ಯಾಪ್ ಸಿದ್ಧಪಡಿಸಿದೆ. ಮಹಿಳೆಯರ ಸಶಕ್ತಿಕರಣಕ್ಕಾಗಿ ಬಿಜೆಪಿ ಫೋಕಸ್ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ
ದೇಶವೇ ಮೊದಲ ಎನ್ನುವ ಸಂಕಲ್ಪ ಬಿಜೆಪಿ ಹೊಂದಿದೆ. ಬಿಜೆಪಿ ಬಡವರ ಸೇವೆಗೆ ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಕಳೆದ ಹತ್ತು ವರ್ಷದಲ್ಲಿ ಭ್ರಷ್ಟಾಚಾರ ಒಂದೇ ಒಂದು ಕಳಂಕ ಇಲ್ಲ. ನಾವು ಸಮರ್ಪಣ ಭಾವದಿಂದ ಕೆಲಸ ಮಾಡಿದ್ದೇವೆ. ನಾನು ಸಿಎಂ ಮನೋಹರ ಲಾಲ್ ಕಟ್ಟರ್ ಮತ್ತು ಸೈನಿಗೆ ಶ್ಲಾಘಿಸುತ್ತೇನೆ. ನಮ್ಮ ನೀತಿ ನಿಯತ್ತಿಗೆ ಬೆಂಬಲ ಸಿಕ್ಕಾಗ, ಕೆಲಸ ಮಾಡಲು ದ್ವಿಗುಣ ಶಕ್ತಿ ಬರುತ್ತದೆ. ಜಮ್ಮು ಕಾಶ್ಮೀರ ಅಭಿವೃದ್ಧಿಯಾಗುತ್ತದೆ, ಭಾರತ ಅಭಿವೃದ್ಧಿಯಾಗುತ್ತದೆ. ನಮ್ಮ ಎಲ್ಲ ಹೋರಾಟದ ಹಿಂದೆ ಕಾರ್ಯಕರ್ತರ ಶ್ರಮವಿದೆ. ಹೆಜ್ಜೆಗೆ ಹೆಜ್ಜೆ ಹಾಕಿ ಭುಜಕ್ಕೆ ಭುಜ ಕೊಟ್ಟು ನಡೆಯುವ ನಮ್ಮ ಕಾರ್ಯಕರ್ತರು ಯಾವುದಕ್ಕೂ ಬಗ್ಗುವುದಿಲ್ಲ ಎಂದು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ.