ಮೈಸೂರು: ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ ಆರ್‌ಎಸ್‍ಎಸ್‍ನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಆರ್‌ಎಸ್‍ಎಸ್ ಆಳ ಮತ್ತು ಅಗಲ ದೇವನೂರು ಮಹಾದೇವ ಕೃತಿ ರಚನೆ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ ಆರ್‌ಎಸ್‍ಎಸ್‍ನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಂದು ಪಕ್ಷದ ಆಳಾಗಿ ಬರೆದಿದ್ದಾರೆ. ಕುಸುಮ ಬಾಲೆ ನಂತರ ದೇವನೂರು ಮಹಾದೇವ ಅವರಲ್ಲಿ ಒಂದಷ್ಟು ಸೃಜನ ಶೀಲತೆ ಉಳಿದುಕೊಂಡಿದೆ ಎಂದು ಕೊಂಡಿದ್ದೆ. ಆದರೆ ಆರ್‌ಎಸ್‍ಎಸ್ ಆಳ ಅಗಲ ಪುಸ್ತಕ ಬರೆಯಲು ಹೋಗಿ ಅವರ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ
Advertisement
Advertisement
ಚತುವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಒಂದು ಧರ್ಮ, ಒಬ್ಬ ನಾಟಕ, ಒಂದು ದೇಶವನ್ನ ಆರ್‌ಎಸ್‌ಎಸ್ ಪ್ರತಿಪಾದಿಸುತ್ತಿದೆ ಎಂದು ಬರೆದಿದ್ದಾರೆ. ಆದರೆ ಒಬ್ಬ ವ್ಯಕ್ತಿ ಒಂದು ಪುಸ್ತಕ ಒಂದು ದೇಶದಿಂದ ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ದೇವನೂರು ಮಹಾದೇವ ಯಾಕೆ ಮಾತನಾಡಲ್ಲ? ಚತುವರ್ಣ ಪದ್ಧತಿ ನಾವು ಬಿಟ್ಟು ಎಷ್ಟೋ ವರ್ಷವಾಗಿವೆ. ಕ್ರಿಶ್ಚಿಯನ್, ಇಸ್ಲಾಂ ಧರ್ಮದಲ್ಲೂ ಚತುವರ್ಣ ಪದ್ಧತಿ ಇದೆ. ಕ್ರಿಶ್ಚಿಯನ್ ಧರ್ಮದಲ್ಲೂ ಕ್ಯಾಥೋಲಿಕ್ ಪ್ರೊಟೆಸ್ಟೆಂಟ್, ನಿಗ್ರೋ ಮುಂತಾದ ಪಂಥಗಳಿವೆ ಎಂದಿದ್ದಾರೆ.
Advertisement
Advertisement
ಇಸ್ಲಾಂ ಧರ್ಮದಲ್ಲೂ ಸುನ್ನಿ, ಸಿಯಾ, ಪಠಾಣ್, ಮೊಗಲ್ ಜಾತಿಗಳಿವೆ. ಚತುವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿ. ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ. ಬ್ಯಾಂಕ್‍ಗಳ ಸಾಲ ರೈಟ್ ಆಫ್ ಬಗ್ಗೆ ಏನೇನೋ ಬರೆದಿದ್ದಾರೆ. ಇದೆಲ್ಲವನ್ನ ಗಮನಿಸಿದರೆ, ಒಬ್ಬ ಕಾಂಗ್ರೆಸ್‍ನ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಬರೆದು ಸಿದ್ದರಾಮಯ್ಯ ದೇವನೂರು ಮಹದೇವ ಜೊತೆ ಮಾತನಾಡಿ ಅವರ ಹೆಸರನ್ನು ಹಾಕಿಸಿದ್ದಾರೆ. ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.
ಹಕ್ಕುಸ್ವಾಮ್ಯವಿಲ್ಲದ ಆರ್‌ಎಸ್‍ಎಸ್ (RSS) ಆಳ ಮತ್ತು ಅಗಲ ಹೆಸರಿನ ಕೃತಿಯನ್ನು ಸಾಹಿತಿ ದೇವನೂರು ಮಹಾದೇವ ರಚಿಸಿದ್ದು, ಆರ್‌ಎಸ್‍ಎಸ್‍ನ ಗೋಲ್ವಾಲ್ಕರ್, ಹೆಡ್ಲವಾ ಚಿಂತನ ಗಂಗಾ ಸಾವರ್ಕರ್ ಭಾಷಣಗಳು ಜೊತೆಗೆ ಮನುಷ್ಯ ವಿರೋಧಿ ಮನಸ್ಮೃತಿ ಮತ್ತು ಭಗವದ್ಗೀತೆಗಳಲ್ಲಿ ದೇಶದ ಕುರಿತು ಹಿಂದುತ್ವದ ಕುರಿತು ಏನೇನೆಲ್ಲಾ ಹೇಳಲಾಗಿದೆ ಎಂಬುವುದನ್ನು ತಿಳಿಸಲಾಗಿದೆ.
ಇವುಗಳಲ್ಲಿ ಯಾವುದನ್ನು ಆರ್‌ಎಸ್‍ಎಸ್ ತನ್ನ ಸಿದ್ಧಾಂತದಲ್ಲಿ ಅಳವಡಿಸಿಕೊಂಡು ಭಾರತದಲ್ಲಿ ಕೆಲಸ ಮಾಡುತ್ತಿದೆ. ಈ ಸಿದ್ಧಾಂತದಿಂದ ಬಹುತ್ವ ಭಾರತಕ್ಕೆ ಮತ್ತು ನಾವೆಲ್ಲ ಒಪ್ಪಿ ಬದುಕುತ್ತಿರುವ ಭಾರತದ ಸಂವಿಧಾನದ ಆಶಯಗಳಿಗೆ ಹೇಗೆ ಧಕ್ಕೆಯುಂಟಾಗುತ್ತದೆ ಎಂಬುದರ ಬಗ್ಗೆ ಬರೆಯಲಾಗಿದೆ.