ಮಡಿಕೇರಿ: ದೆಹಲಿಯ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಕೊಡಗಿನಿಂದ ಭಾಗವಹಿಸಿದ್ದವರು ಕೊಡಗಿಗೆ ವಾಪಸ್ ಬಂದೇ ಇಲ್ಲ. ಹೀಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೊಡಗು ಎಸ್‍ಪಿ ಸುಮನ್ ಡಿ ಪನ್ನೇಕರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ 11 ಜನರು ಭಾಗವಹಿಸಿದ್ದವರು. ಜೊತೆಗೆ ವಾಪಸ್ ಬರಲು ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ದೇಶದಲ್ಲಿ ಲಾಕ್ ಡೌನ್ ಆಗಿದ್ದರಿಂದ ಯಾರೂ ಕೂಡ ವಾಪಸ್ ಬಂದಿಲ್ಲ. 11 ಜನರಲ್ಲಿ ಮುಖ್ಯವಾಗಿ 7 ಜನರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ದೆಹಲಿಯ ಆಸ್ಪತ್ರೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
11 ಜನರಲ್ಲಿ ಇಬ್ಬರು ಸಭೆಗೆ ಭಾಗವಹಿಸಲು ಹೋಗಿದ್ದವರಲ್ಲ. ಬದಲಾಗಿ ಸಭೆ ನಡೆದ ಪ್ರದೇಶದಲ್ಲಿ ಇದ್ದವರು. ಇವರು ಮಾರ್ಚ್ 9ರಂದೇ ಕೊಡಗಿಗೆ ವಾಪಸ್ ಆಗಿದ್ದು, ಅಂದಿನಿಂದ ಹೋಂ ಕ್ವಾರಂಟೈನ್ ಮಾಡಿ ಆ ಅವಧಿಯನ್ನು ಮುಗಿಸಿ ಆರೋಗ್ಯವಾಗಿದ್ದಾರೆ. ಇಬ್ಬರು ಸೈನಿಕರು ಧರ್ಮ ಸಭೆಯ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ, ಕೊಡಗಿಗೆ ವಾಪಸ್ ಆಗಿದ್ದು, ಅವರಲ್ಲಿ ಒಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಇನ್ನೊಬ್ಬರು ಹಾಸನದ ಅವರ ಸಂಬಂಧಿಕರ ಮನೆಗೆ ತೆರಳಿದ್ದು, ಅಲ್ಲಿಯೇ ಇದ್ದಾರೆ. ಈ ಕುರಿತು ಅಲ್ಲಿನ ಎಸ್‍ಪಿ ಅವರೊಂದಿಗೆ ಮಾತನಾಡಿ ಮಾಹಿತಿ ನೀಡಲಾಗಿದೆ. ಕೆಲವು ಮಾಧ್ಯಮಗಳಲ್ಲಿ ಕೊಡಗಿನಲ್ಲೇ ಇದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟವಾಗಿದೆ. ಇದು ಎಲ್ಲವು ಸುಳ್ಳು ಜನರು ಯಾರು ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಎಸ್‍ಪಿ ಹೇಳಿದರು.