ಪುಣೆ: ನಗರವನ್ನು ಶುಚಿತ್ವವಾಗಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಇದೀಗ ಪುಣೆ ನಗರ ಸಭೆ ಶಿಕ್ಷೆ ನೀಡಲು ಮುಂದಾಗಿದೆ. ಈ ಶಿಕ್ಷೆಯಿಂದ ವ್ಯಕ್ತಿ ಮತ್ತೆ ಅಂತಹ ತಪ್ಪು ಮಾಡಲಾರ. ಯಾಕಂದ್ರೆ ಆ ಶಿಕ್ಷೆ ಅಷ್ಟೊಂದು ಅಸಹ್ಯವಾಗಿದೆ.
ಏನ್ ಶಿಕ್ಷೆ..?:
ಪುಣೆ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ನಾಗರಿಕ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಮನುಷ್ಯ ಎಲ್ಲೆಂದರಲ್ಲಿ ಉಗುಳುತ್ತಾನೆ. ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಉಪಾಯ ಹೂಡಿದ ಸಂಸ್ಥೆ, ಉಗಿದವನಿಂದಲೇ ಅದನ್ನು ಕ್ಲೀನ್ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆತನಿಗೆ 150 ರೂ ದಂಡ ಕಟ್ಟುವಂತೆ ಹೇಳುತ್ತಾರೆ.
Advertisement
Advertisement
ಈ ಶಿಕ್ಷೆಯನ್ನು ಕಳೆದ ವಾರದಿಂದ ಆರಂಭ ಮಾಡಲಾಗಿದೆ. ಸದ್ಯ 5 ವಾರ್ಡ್ ಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರಂಭಿಸಿದ 8 ದಿನದಲ್ಲಿ ನಗರಸಭೆಯವರು ರಸ್ತೆಯಲ್ಲಿ ಉಗುಳುತಿದ್ದ ಸುಮಾರು 156 ಮಂದಿಯನ್ನು ಹಿಡಿದಿದ್ದು, ಅವರಿಂದಲೇ ಉಗುಳಿದ ಜಾಗವನ್ನು ಕ್ಲೀನ್ ಮಾಡಿಸಿದ್ದಾರೆ. ಅಲ್ಲದೇ ಪ್ರತಿಯೊಬ್ಬರಿಂದಲೂ 150 ರೂ. ದಂಡ ವಸೂಲಿ ಮಾಡಿದ್ದಾರೆ ಅಂತ ಪುಣೆ ನಗರಸಭೆಯ ದಯಾನೇಶ್ವರ್ ಮೊಲಾಕ್ ತಿಳಿಸಿದ್ದಾರೆ.
Advertisement
ಶಿಕ್ಷೆಯ ಉದ್ದೇಶವೇನು..?
ಜನರಲ್ಲಿ ಕ್ಲೀನ್ ಬಗ್ಗೆ ಜಾಗೃತಿ ಮೂಡಿಸುವುದೇ ಈ ಶಿಕ್ಷೆಯ ಪ್ರಮುಖ ಉದ್ದೇಶವಾಗಿದೆ. ಯಾಕಂದ್ರೆ ಹೆಚ್ಚಿನವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಲ್ಲೆಂದರಲ್ಲಿ ಉಗುಳುತ್ತಾರೆ. ಹೀಗಾಗಿ ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಉಗುಳನ್ನು ತಾವೇ ಶುಚಿಗೊಳಿಸಲು ಅಸಹ್ಯಪಡುತ್ತಾರೆ. ಇದರಿಂದ ಪಾಠ ಕಲಿಯುತ್ತಾರೆ. ಅಲ್ಲದೇ ಮತ್ತೊಮ್ಮೆ ಉಗುಳುವ ಮುನ್ನ 2 ಬಾರಿ ಯೋಚನೆ ಮಾಡುತ್ತಾರೆ ಅಂತ ಅವರು ತಿಳಿಸಿದ್ದಾರೆ.
Advertisement
2018ರ ಸ್ವಚ್ಛ ಗ್ರಾಮದಲ್ಲಿ ಪುಣೆಗೆ 10 ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ಇಂದೋರ್ ನಗರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಪುಣೆ ಸ್ವಚ್ಛ ನಗರ ಮಾಡುವಲ್ಲಿ ಮೊಲಾಕ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews