ಹಿಂದಿಯಲ್ಲಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ: TN ಸಚಿವ ಪೊನ್ಮುಡಿ

Public TV
1 Min Read
Ponmudy

ಚೆನ್ನೈ: ಹಿಂದಿ ಮಾತನಾಡುವವರು ಕೀಳು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಿಂದಿ ಮಾತನಾಡುವವರು ಕೊಯಮತ್ತೂರಿನಲ್ಲಿ ಪಾನಿಪುರಿ ಮಾರುತ್ತಿದ್ದಾರೆ ಎಂದು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ಪರೋಕ್ಷವಾಗಿ ಹೇಳಿದ್ದಾರೆ.

ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಪೊನ್ಮುಡಿ ಅವರು, ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ. ಆದರೆ ಹಿಂದಿ ಐಚ್ಛಿಕವಾಗಿರಬೇಕೆ ಹೊರತು ಕಡ್ಡಾಯವಾಗಿರಬಾರದು ಎಂದರು. ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಯೋಜನಕಾರಿ ಅಂಶಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು. ಆದರೆ ರಾಜ್ಯ ಸರ್ಕಾರವು ಕೇವಲ ದ್ವಿಭಾಷಾ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಕಾಳಿ ಸ್ವಾಮಿಗೆ ಮಸಿ ಬಳೆದಿದ್ದು ಅಕ್ಷಮ್ಯ ಅಪರಾಧ: ಮುತಾಲಿಕ್

Panipuri2

ಈಗಾಗಲೇ ಅಂತರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಕಲಿಯುತ್ತಿರುವಾಗ ಹಿಂದಿಯನ್ನು ಏಕೆ ಕಲಿಯಬೇಕು? ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ. ಆದರೆ, ಹಿಂದಿ ಐಚ್ಛಿಕ ಭಾಷೆಯಾಗಿರಬೇಕೇ ಹೊರತು ಕಡ್ಡಾಯವಲ್ಲ. ಹಿಂದಿಗಿಂತ ಇಂಗ್ಲಿಷ್‍ಗೆ ಹೆಚ್ಚು ಬೆಲೆಯಿದೆ. ಆದರೆ ಹಿಂದಿ ಭಾಷೆಯನ್ನು ಮಾತನಾಡುವವರು ಕೀಳು ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಅದು ಒಂದು ಕಾಲದಲ್ಲಿ ಹಿಂದಿ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಿದ್ದರು, ಆದರೆ ಅದು ನಿಜ ನಾ? ಕೊಯಮತ್ತೂರಿನಲ್ಲಿ ಈಗ ಯಾರು ಪಾನಿ ಪುರಿ ಮಾರುತ್ತಿರುವವರನ್ನು ನೋಡಿದ್ದೀರಾ? ಈಗ ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

Share This Article
Leave a Comment

Leave a Reply

Your email address will not be published. Required fields are marked *