ವಿಜಯಪುರ: ಪಾಕಿಸ್ತಾನಕ್ಕೆ (Pakistan) ಜೈಕಾರ ಹಾಕುವವರಿಗೆ ಚಪ್ಪಲಿಯಿಂದ ಹೊಡೆಯಿರಿ, ಅವರ ಪರವಾಗಿ ನಾನು ಇರುತ್ತೇನೆ. ಅವರ ವಕಾಲತ್ತು ನಾನು ನೋಡಿಕೊಳುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವ ಜಯಂತಿಯನ್ನು ಬಸವಣ್ಣನ ಜನ್ಮಭೂಮಿ ಬಸವನ ಬಗೇವಾಡಿಯಲ್ಲಿ ಮಾಡಬೇಕೆಂಬ ಒತ್ತಾಯ ವಿಚಾರವಾಗಿ, ಸರ್ಕಾರ ಬಸವನ ಬಾಗೇವಾಡಿ, ಕೂಡಲಸಂಗಮ, ಬಸವ ಕಲ್ಯಾಣ ಮೂರು ಕಡೆ ಬಸವ ಜಯಂತಿ ಮಾಡಬೇಕಿದೆ. ಅದು ಸರ್ಕಾರಕ್ಕೆ ದೊಡ್ಡ ಕೆಲಸವಲ್ಲ. ಈ ಬಾರಿ ಕೂಡಲಸಂಗಮದಲ್ಲಿ ಮಾಡುವುದರ ಬಗ್ಗೆ ಆಕ್ಷೇಪಣೆ ಇಲ್ಲ. ಬಸವನ ಬಾಗೇವಾಡಿಯಲ್ಲಿ ಮಾಡದಿರಲು ಅಯೋಗ್ಯ ನಾಲಾಯಕರ ಬಗ್ಗೆ ಧಿಕ್ಕಾರ ಇದೆ. ಶಿವಾನಂದ ಪಾಟೀಲ್ ಅಂತಹವರಿಂದ ಧರ್ಮದ ಕೆಲಸ ಆಗಲ್ಲ. ಆತ ಲೂಟಿ ಮಾಡುವ ಶಾಸಕ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:ಪಾಕ್‌ಗೆ ಜೈ ಎಂದವರ ಕೃತ್ಯ ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸರಿಂದ ಕಿರುಕುಳ: ಸುನಿಲ್ ಕುಮಾರ್ ಆಕ್ರೋಶ
ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ್ದ ಸಚಿವ ಹಾಗೂ ಶಾಸಕರ ವಿಚಾರವಾಗಿ ಮಾತನಾಡಿ, ಅವನು ಶಿವಾನಂದ ಪಾಟೀಲ್ ಅಲ್ಲ, ಅವನು ಶಿವಾನಂದ ಹಚಡದ. ಅವನಿಗೆ ತಾಕತ್ ಇದ್ದರೆ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ನನ್ನ ವಿರುದ್ಧ ಸ್ಪರ್ಧಿಸಲಿ. ಮುಂದಿನ ಶುಕ್ರವಾರದೊಳಗೆ ರಾಜೀನಾಮೆ ಕೊಡಲಿ, ನಿಮ್ಮ ಮತಕ್ಷೇತ್ರದಲ್ಲೇ ಪಕ್ಷೇತರವಾಗಿ ನಿಂತು ಆರಿಸಿ ಬರುತ್ತೇನೆ ಎಂದು ಕಿಡಿಕಾರಿದರು.
ನನ್ನ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಯಾರಾದರೂ ಭಾರತ ಮಾತಾಕಿ ಜೈ ಅಂದ್ರಾ, ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿದ್ದಾರಾ? ಕಾಂಗ್ರೆಸ್ ಸಚಿವ, ಶಾಸಕರನ್ನು ಮುಸ್ಲಿಂ ಮುಖಂಡರು ಬ್ಲಾö್ಯಕ್‌ಮೇಲ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವವರಿಗೆ ಚಪ್ಪಲಿಯಿಂದ ಹೊಡೆಯಿರಿ. ಅವರ ಪರವಾಗಿ ನಾನು ಇರುತ್ತೇನೆ. ಅವರ ವಕಾಲತ್ತು ನಾನು ನೋಡಿಕೊಳುತ್ತೇನೆ ಎಂದರು.ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ಸಿನಿಮಾದಲ್ಲಿ ಪೃಥ್ವಿ ಅಂಬರ್- ’ಕೊತ್ತಲವಾಡಿ’ ಚಿತ್ರದ ಪೋಸ್ಟರ್ ಔಟ್