ಧಾರವಾಡ: ಇಡೀ ದೇಶದಲ್ಲಿ 3 ಲಕ್ಷ ಮದರಸಾಗಳಿದ್ದು, ಅಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಅರೆದು ಕುಡಿಸಲಾಗುತ್ತಿದೆ. ಇದರಿಂದ ಮದರಸಾಗಳಲ್ಲಿ ತಯಾರಾಗುವ ವಿದ್ಯಾರ್ಥಿಗಳು ಹಿಂದೂ ವಿರೋಧಿಗಳು, ದೇಶ ವಿರೋಧಿ ಹಾಗೂ ಭಯೋತ್ಪಾದಕರಾಗಿ ಹೊರ ಬರ್ತಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಅವರಿಂದು ಮಾತನಾಡಿ, ದೇಶದಲ್ಲಿ ಕುರಾನ್ ಮತ್ತು ಶರಿಯಾ ಮುಸ್ಲಿಂ ಶಿಕ್ಷಣ ಕೊಡುವ ವಿಚಾರವಾಗಿ ಮದರಸಾ ತೆರೆಯಲಾಗಿದೆ. ಆದರೆ ಇಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಅರೆದು ಕುಡಿಸಲಾಗುತ್ತಿದೆ. ಇದರಿಂದ ಅವರು ಮುಂದೆ ಭಯೋತ್ಪಾದಕರಾಗಿ ಹೊರ ಬರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ
ಪಾಕಿಸ್ತಾನದಲ್ಲೂ ಮದರಸಾ ಬಂದ್: ಮದರಾಗಳಲ್ಲಿ ಓದಿದ ಎಷ್ಟೋ ಮಂದಿ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಪಾಕಿಸ್ತಾನದಲ್ಲೂ ಈಗಾಗಲೇ ಮದರಸಾಗಳನ್ನು ಬಂದ್ ಮಾಡಲಾಗುತ್ತಿದೆ. ಮದರಸಾ ಯಾವ ರೀತಿ ಶಿಕ್ಷಣ ನೀಡುತ್ತಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮದರಸಾಗಳನ್ನು ಬ್ಯಾನ್ ಮಾಡಬೇಕು. ಜೊತೆಗೆ ಹಿಂದೂಗಳ ತೆರಿಗೆ ಹಣದಲ್ಲಿ ಸರ್ಕಾರದಿಂದ ಅನುದಾನ ಪಡೆದು ಬೋಗಸ್ ಆಗಿ ನಡೆಸುತ್ತಿರುವ ಮದರಸಾಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.