ಬೆಳಗಾವಿ: ಈ ದೇಶದ ಅನ್ನ ತಿಂದು, ಈ ದೇಶದ ನೀರು ಕುಡಿದು, ಪಾಕಿಸ್ತಾನದ ಪರವಾಗಿ ಮಾತನಾಡುವವರ ಬಗ್ಗೆ ನಾವು ಮಾತನಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
Advertisement
ಸಮಗ್ರವಾಗಿ ನಡೆಯುತ್ತಿರುವ ದೇಶ ವಿರುದ್ಧ ಚಟುವಟಿಕೆಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ. ಭಾರತ ಉಳಿದ್ರೇನೆ ಕನ್ನಡ ಉಳಿಯುತ್ತದೆ ಮರಾಠಿ ಉಳಿಯುತ್ತದೆ. ಭಾರತ ಇಲ್ಲದ್ದಿದ್ದರೆ ಕನ್ನಡನೂ ಇಲ್ಲ ಮರಾಠಿಯು ಇಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
Advertisement
ಹಿಂದಿಯಲ್ಲಿ ಉಲ್ಲೇಖಗಳನ್ನು ಬರೆದರೆ ವಿರೋಧಿಸುತ್ತಾರೆ. ಅದೇ ಉರ್ದು ಭಾಷೆಯಲ್ಲಿ ಬರೆದರೆ ಯಾರು ಕೇಳುವುದಿಲ್ಲ. ಹಿಂದಿ ವಿರೋಧ ಮಾಡುವವರು ಉರ್ದು ಯಾಕೆ ವಿರೋಧ ಮಾಡುವುದಿಲ್ಲ. ಇದರ ಹಿಂದೆ ವಿರೋಧ ಪಕ್ಷದವರ ದೊಡ್ಡ ಷಡ್ಯಂತ್ರವಿದೆ ಎಂದು ಗಂಭೀರ ಆರೋಪ ಮಾಡಿದರು.
Advertisement
Advertisement
ಎಲ್ಲರ ಬಣ್ಣ ಬಯಲಾಗಬೇಕು. ಪಾಕಿಸ್ತಾನ ಪರ ಘೋಷಣೆ ಕೂಗೋರು, ಉರ್ದು ಭಾಷೆಯಲ್ಲಿ ಬೋರ್ಡ್ ಬರೆಯುವವರನ್ನು ಗಡಿಪಾರು ಮಾಡಬೇಕು ಎಂಬ ಹೇಳಿಕೆಗೆ ವಿರೋಧ ಪಕ್ಷದವರು ಯತ್ನಾಳ್ ಅವರು ಸಂವಿಧಾನ ಬಾಹಿರ ಹೇಳಿಕೆ ಕೊಡುತ್ತಿದ್ದಾರೆ ಎಂದಾಗ ನಾನು ಹಿಂದುತ್ವದ ಪರ ಮಾತಾಡುತ್ತಿದ್ದೇನೆ ಎಂದು ಯತ್ನಾಳ್ ತಿರುಗೇಟು ನೀಡಿದರು.
ಈ ವಿಚಾರವಾಗಿ ನಡೆದ ಕಲಾಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು ಈ ವೇಳೆ ಜೈ ಶ್ರೀರಾಂ ಎಂಬ ಘೋಷಣೆಯು ವಿಧಾನಸಭೆಯಲ್ಲಿ ಮೊಳಗಿತು. ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ – ಡಿಕೆಶಿ ವಿರುದ್ಧ ಸಿ.ಟಿ.ರವಿ ಆಕ್ರೋಶ