Connect with us

Bagalkot

ನೆಹರು ಕುಟುಂಬದ ಬಗ್ಗೆ ಅಪಹಾಸ್ಯ ಮಾಡೋರು ದೇಶ ದ್ರೋಹಿಗಳು: ರಮಾನಾಥ್ ರೈ

Published

on

ಬಾಗಲಕೋಟೆ: ರಾಷ್ಟ್ರಭಕ್ತರು ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ಹಿಯಾಳಿಸೋದಿಲ್ಲ. ಮೋತಿಲಾಲ್ ನೆಹರು ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಹತ್ತು ವರ್ಷಗಳ ಕಾಲ ಅವರು ಜೈಲು ವಾಸ ಅನುಭವಿಸಿದ್ದಾರೆ. ನೆಹರು ಕುಟುಂಬದ ಬಗ್ಗೆ ಅಪಹಾಸ್ಯ ಮಾಡೋರು ದೇಶ ದ್ರೋಹಿಗಳು ಎಂದು ಅರಣ್ಯ ಖಾತೆ ಸಚಿವ ರಮಾನಾಥ್ ರೈ ಹೇಳಿದ್ದಾರೆ.

ಜಮಖಂಡಿ ಪಟ್ಟಣಕ್ಕೆ ಭೇಟಿ ನೀಡಿದ್ದ ರಮಾನಾಥ್ ರೈ, ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು. ಕಾಂಗ್ರೆಸ್ ಈಸ್ ಮೈ ರಿಲಿಜಿಯನ್ ಎಂದು ಪಕ್ಷಾಭಿಮಾನ ಮೆರೆದರು. ನಮ್ಮ ಜಿಲ್ಲೆಯಲ್ಲಿ ಸಾಮರಸ್ಯ ಹಾಳು ಮಾಡ್ತಿರೋರು ಬಿಜೆಪಿಯವರು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ವ್ಯಂಗ್ಯವಾಡಿದರು.

ಒಂದು ಕಡೆ ಬಿಜೆಪಿ ಮತ್ತೊಂದು ಕಡೆ ಎಸ್‍ಟಿಪಿ ಕಾರ್ಯಕರ್ತರು ಮತೀಯ ಭಾವನೆ ಇಟ್ಟುಕೊಂಡು ಸಾಮರಸ್ಯ ಹಾಳು ಮಾಡ್ತಿದ್ದಾರೆ. ಒಬ್ಬ ಅಲ್ಪಸಂಖ್ಯಾತ ಮತೀಯವಾದಿಯಾಗಿದ್ದರೆ ಸಮುದಾಯಕ್ಕೆ ಅಪಾಯ, ಬಹುಸಂಖ್ಯಾತ ಮತೀಯವಾದಿಯಾದರೆ ದೇಶಕ್ಕೆ ಅಪಾಯ ಅಂದ್ರು.

ಕಲ್ಲಡ್ಕ ಪ್ರಭಾಕರ್ ಕುರಿತು ಮಾತನಾಡಿದ ರಮಾನಾಥ್ ರೈ, ಅವರ ಶಾಲೆಗೆ ಅನ್ನ ನೀಡದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಅದು ಒಂದು ಅನುದಾನ ಸಹಿತ ಶಾಲೆ. ಎಲ್ಲ ಅನುದಾನ ಸಹಿತ ಶಾಲೆಗಳಿಗೂ ನಾವೂ ಅನ್ನ ಕೊಡ್ತೇವೆ. ಆದರೆ ಅವರಿಗೆ ಅನ್ನ ಬೇಕಿಲ್ಲ, ದುಡ್ಡು ಬೇಕು. ಅವರಿಗೆ ಕೊಲ್ಲೂರು ದೇವಸ್ಥಾನದಿಂದ ಆಹಾರದ ಬದಲಾಗಿ ದುಡ್ಡಿನ ರೂಪದಲ್ಲಿ ಸಂದಾಯವಾಗ್ತಿದೆ ಎಂದು ಪ್ರಭಾಕರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *