ಚಿತ್ರದುರ್ಗ: ಕಮೀಷನ್ ಪಡೆದು ಜೈಲಿಗೆ ಹೋದವರೆಲ್ಲಾ ಅಮಿತ್ ಶಾ ಸಂಗಾತಿಗಳು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಯಾರೋ ಸ್ನೇಹಿತರು ಕೊಟ್ಟ ವಾಚ್ ಅದು. ಅದನ್ನ ಈಗ ವಿಧಾನಸೌಧದಲ್ಲಿ ಬಿಸಾಕಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಬಿಜೆಪಿಯ ತಂತ್ರವಿದು. ಬಿಜೆಪಿಯವರು ಗೆಲ್ಲುವುದಕ್ಕೆ ಆಗದೇ ಈ ರೀತಿ ಬಯ್ಯುತ್ತಾ ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ತೇಜೋವಧೆ ಮಾಡುತ್ತಾ, ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ಬಿಜೆಪಿಯರು ಜನರ ಗಮನ ಸೆಳೆಯುತ್ತಿದ್ದಾರೆ. ಆದರೆ ಗೆಲ್ಲುವುದು ಕಾಂಗ್ರೆಸ್. ಅನಂತಕುಮಾರ್ ಹೆಗ್ಡೆ ಮಾತಿಗೆ ನಾವು ಉತ್ತರಿಸಬಾರದು. ಆತನ ಮಾತುಗಳನ್ನು ನಿರ್ಲಕ್ಷಿಸಬೇಕು. ಆತನ ಬಗ್ಗೆ ಮಾತನಾಡಲೇ ಬಾರದು ಎಂದು ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.