ಬೆಂಗಳೂರು: ಕಾಂಗ್ರೆಸ್‌ನ ಮುಖಂಡರು ವಿಕೃತ ಮನಸ್ಸಿನವರು. ಸಭಾಧ್ಯಕ್ಷರ ಆಹ್ವಾನಕ್ಕೆ, ಸೌಜನ್ಯಕ್ಕಾದರೂ ದಿ ಕಾಶ್ಮೀರ್ ಫೈಲ್ಸ್ ಚಿತ್ರವೀಕ್ಷಣೆಗೆ ಬರಬೇಕಿತ್ತು. ಚಿತ್ರ ವೀಕ್ಷಣೆ ಮಾಡದವರು ದೇಶ ವಿರೋಧಿಗಳು ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಲ್ಲಿರುವವರು ವೋಟ್ ಬ್ಯಾಂಕ್, ಅಲ್ಲಿ ಆಡಳಿತ ಮಾಡಿದವರು ವೋಟ್ ಬ್ಯಾಂಕಿಗೋಸ್ಕರ, ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತ ಇದ್ದಾರೆ. ಯಾರು ಹಿಂದುತ್ವ ರಾಷ್ಟ್ರೀಯ ಮನೋಭಾವ, ದೇಶ ಪ್ರೀತಿ ಮಾಡುವವರು ಈ ಚಿತ್ರ ನೋಡಬಹುದು ಎಂದರು. ಇದನ್ನೂ ಓದಿ: ಬಾಲಿವುಡ್ ಪಾಪ ತೊಳೆದ ದಿ ಕಾಶ್ಮೀರ್ ಫೈಲ್ಸ್: ಕಂಗನಾ ರಣಾವತ್
Advertisement
ಕಾಶ್ಮೀರದಲ್ಲಿ ಉಗ್ರವಾದಿಗಳ ಅಟ್ಟಹಾಸದ ವೀಕ್ಷಣೆ ಮಾಡುತ್ತ ಇದ್ದರೆ ಮೈ ರೋಮಾಂಚನವಾಗುತ್ತದೆ. ಕಾಶ್ಮೀರ ಪಂಡಿತರು ಅನುಭವಿಸಿದ ಚಿತ್ರಹಿಂಸೆ ಹಾಗೂ ಅವರ ಮಾರಹೋಮಕ್ಕೆ ಹಿಂದಿನ ಸರ್ಕಾರವೇ ಕಾರಣ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಮೋದಿ ಭರವಸೆಯಂತೆ ಕಾಶ್ಮೀರದಲ್ಲಿ ಉಸಿರಾಡಲು ಅವಕಾಶ ದೊರಕಿದೆ ಎಂದು ಹೇಳಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
Advertisement
ಚಿತ್ರ ವೀಕ್ಷಣಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ಪ್ರತಿಯೊಬ್ಬರೂ ಈ ಚಿತ್ರ ವೀಕ್ಷಣೆ ಮಾಡಬೇಕು. ಚಿತ್ರ ವೀಕ್ಷಣೆಯಲ್ಲಿ ರಾಜಕಾರಣ, ಸ್ವಾರ್ಥ ಮುಖ್ಯ ಅಲ್ಲ ಎಂದರು.