ಭೂತಕೋಲ ಹಿಂದೂ ಸಂಸ್ಕೃತಿ ಎನ್ನುವ ವಿಚಾರವಾಗಿ ನಟ ಚೇತನ್ ಆಡಿದ ವಿರೋಧಿ ಮಾತುಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ. ಭೂತಕೋಲ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹೇಳಿದ್ದರು. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ, ಅದೊಂದು ಬುಡಕಟ್ಟು ಸಂಪ್ರದಾಯ ಎಂದು ಹೇಳುವ ಮೂಲಕ ಚೇತನ್ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದರು.
Advertisement
ಚೇತನ್ (Chetan) ಈ ರೀತಿ ಹೇಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ನಾನಾ ರೀತಿಯ ಕಾಮೆಂಟ್ ಗಳು ಬಂದವು. ಅದರಲ್ಲೂ ಚೇತನ್ ಪೌರತ್ವದ (Citizenship) ಬಗ್ಗೆಯೂ ಪ್ರಶ್ನೆ ಮಾಡಲಾಯಿತು. ಚೇತನ್ ಭಾರತದ ಪೌರತ್ವ ಪಡೆದಿಲ್ಲ. ಹಾಗಾಗಿ ಭಾರತದ ಬಗ್ಗೆ ಮಾತನಾಡುವಂತಹ ನೈತಿಕ ಹಕ್ಕು ಅವರಿಗಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೂ ಚೇತನ್ ಇದೀಗ ಉತ್ತರಿಸಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
Advertisement
Advertisement
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೇತನ್, ‘ನಾನು ಚರ್ಚೆಯ ಮೂಲಕ ಗೆಲ್ಲಬೇಕು. ಸಂವಾದದ ಮೂಲಕ ಅರ್ಥ ಮಾಡಿಕೊಳ್ಳಬೇಕು. ನಾನು ಆಡಿದ ಮಾತುಗಳಲ್ಲಿ ಏನು ಸುಳ್ಳು ಇದೆ ಹೇಳಲಿ. ಯಾರಿಗೆ ನನ್ನನ್ನು ಸೋಲಿಸಲು ಆಗುವುದಿಲ್ಲವೋ, ಅವರು ಪೌರತ್ವದ ಬಗ್ಗೆ ಮಾತನಾಡುತ್ತಾರೆ. ನನ್ನ ಹುಟ್ಟು ನನ್ನ ಕೈಯಲ್ಲಿ ಇಲ್ಲ. ಯಾರ ಕೈಯಲ್ಲೂ ಇಲ್ಲ. ನಾನು ಯಾವಾಗಲೂ ಸತ್ಯದ ಪರವಾಗಿ ಇರುತ್ತೇನೆ. ಹಾಗಾಗಿ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಅನಿವಾರ್ಯ’ ಅಂದಿದ್ದಾರೆ.