ಭಾಷಣದ ವೇಳೆ ಯಡವಟ್ಟು – ಕಾಶ್ಮೀರಿ ಪಂಡಿತರಿಗೆ ಬದಲಾಗಿ ʻಪಾಕ್‌ ಆಕ್ರಮಿತ ಕಾಶ್ಮೀರʼದಿಂದ ಬಂದ ನಿರಾಶ್ರಿತರು ಎಂದ ರಾಗಾ

Public TV
3 Min Read
RAHUL GANDHI 1
  • ರಾಹುಲ್‌ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಶ್ರೀನಗರ: ಜಮ್ಮುವಿನಲ್ಲಿಂದು ನಡೆದ ಚುನಾವಣಾ ರ‍್ಯಾಲಿಯನ್ನಿದ್ದೇಶಿಸಿ ಭಾಷಣ ಮಾಡುವ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಯಡವಟ್ಟು ಮಾಡಿದ್ದಾರೆ. ಕಾಶ್ಮೀರಿ ಪಂಡಿತರು (Kashmiri Pandits) ಅನ್ನುವುದಕ್ಕೆ ಬದಲಾಗಿ ʻಪಾಕ್‌ ಆಕ್ರಮಿತ ಕಾಶ್ಮೀರʼದಿಂದ (Refugees from PoK) ಬಂದ ನಿರಾತ್ರಿಯರು ಎಂದು ಉಲ್ಲೇಖಿಸಿದ್ದಾರೆ. ಬಳಿಕ ಎಚ್ಚೆತ್ತುಕೊಂಡು ಮತ್ತೆ ಕಾಶ್ಮೀರಿ ಪಂಡಿತರು ಎಂದು ಹೇಳಿದ್ದಾರೆ.

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಪಿಒಕೆಯಿಂದ ಬಂದಿರುವ ನಿರಾತ್ರಿತರಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದ್ದರ. ಬಳಿಕ ಕ್ಷಮಿಸಿ, ಕಾಶ್ಮೀರಿ ಪಂಡಿತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ರಾಹುಲ್‌ ಗಾಂಧಿ (Rahul Gandhi) ಅವರ ಹೇಳಿಕೆ ಕುರಿತ ಈ ವೀಡಿಯೋ ಸಾಮಾಜಿಕ ತಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕರೂ ರಾಗಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಐಟಿ ಸೆಲ್‌ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ, ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಪಿಒಕೆ ನಿರಾಶ್ರಿತರು ಮತ್ತು ಕಾಶ್ಮೀರಿ ಪಂಡಿತರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಒಂದು ಕಡೆ ಸಾಗರೋತ್ತರ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ, ರಾಹುಲ್‌ ಗಾಂದಿ ಪಪ್ಪು ಅಲ್ಲ ಅಂತಾರೆ, ರಾಹುಲ್‌ ಗಾಂದಿ ಹೀಗೆ ಮಾಡ್ತಾರೆ. ಕಾಶ್ಮೀರದ ಅವ್ಯವಸ್ಥೆ ನೆಹರೂ ಅವರ ಪರಂಪರೆಯಾಗಿದೆ. ಅದು ಸಾಕಾಗಲ್ಲ ಅಂತ ಈಗ ರಾಹುಲ್‌ ಗಾಂಧಿ ಬಂದಿದ್ದಾರೆ. ಅದಕ್ಕೆ ಅವರ ಇಂದಿನ ಹೇಳಿಕೆಯೇ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

Jammu and Kashmir Election

ಕೊನೆಗೂ ತಪ್ಪನ್ನು ಒಪ್ಪಿಕೊಂಡಿದ್ದಾರೆ:
ಆಂಧ್ರಪ್ರದೇಶದ ಬಿಜೆಪಿ ನಾಯಕ ವಿಷ್ಣುವರ್ಧನ್ ರೆಡ್ಡಿ (Vishnu Vardhan Reddy) ಮಾತನಾಡಿ, ಕಾಂಗ್ರೆಸ್‌ ಮತ್ತು ಅವರ ಮಿತ್ರಪಕ್ಷಗಳು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕ್‌ನೊಂದಿಗಿನ ಮಾತುಕತೆಯನ್ನು ಪ್ರತಿಪಾದಿಸುತ್ತಲೇ ಇವೆ. ಹಾಗಾಗಿ ಭಾರತ ಸರ್ಕಾರ ಅವರಿಗೆ ಹೊರಗಿನದ್ದು ಅನ್ನಿಸಿದೆ. ನೀವು ಸತ್ಯವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಅದು ಹೊರಗೆ ಬರಲೇಬೇಕು. ತಪ್ಪು ಮಾಡಿದ್ದರೂ ನಿಜವಾದ ಸತ್ಯವನ್ನೇ ಮಾತನಾಡಿದ್ದೀರಿ ನಿಮಗೆ ಅಭಿನಂದನೆಗಳು ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

ಜಮ್ಮು-ಕಾಶ್ಮೀರಕ್ಕೆ ಅನ್ಯಾಯವಾಗಿದೆ:
ಜಮ್ಮು ಮತ್ತು ಸೋಪೋರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತ್ಯೇಕ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಕುರಿತು ಪ್ರಸ್ತಾಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರು ಕೂಡಲೇ ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು: ವಿಜಯೇಂದ್ರ ಆಗ್ರಹ

ಭಾರತದ ಇತಿಹಾಸದಲ್ಲಿ 1947ರ ನಂತರ ಹಲವು ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳನ್ನಾಗಿ ಪರಿವರ್ತಿಸಲಾಯಿತು. ರಾಜ್ಯಗಳನ್ನು ವಿಭಜಿಸಲಾಯಿತು. ಆಂಧ್ರಪ್ರದೇಶದಿಂದ ತೆಲಂಗಾಣ, ಬಿಹಾರದಿಂ ಜಾರ್ಖಂಡ್‌, ಮಧ್ಯಪ್ರದೇಶದಿಂದ ಛತ್ತಿಸ್‌ಘಡವನ್ನು ರಾಜ್ಯಗಳನ್ನಾಗಿ ವಿಭಜಿಸಲಾಯಿತು. ಆದ್ರೆ ಸ್ವಾತಂತ್ರ್ಯ ನಂತರ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದು ಇದೇ ಮೊದಲು. ಅದೇ ಜಮ್ಮು ಮತ್ತು ಕಾಶ್ಮೀರ. ಇರದಿಂದ ಇಲ್ಲಿನ ಜನಕ್ಕೆ ಅನ್ಯಾಯವಾಗಿದೆ, ಇಲ್ಲಿನ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅವರಿಂದ ಕಿತ್ತುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಬಾರಿ ಚುನಾವಣೆಗೂ ಮುನ್ನವೇ ರಾಜ್ಯ ಸ್ಥಾನಮಾನ ಸಿಗುತ್ತದೆ ಅಂದುಕೊಂಡಿದ್ದೆವು. ಆಗ ಸರಿಯಾದ ಚುನಾವಣೆ ನಡೆಸಲು ಮಾರ್ಗವಾಗುತ್ತಿತ್ತು. ಆದಾಗ್ಯೂ ಮೊದಲು ಚುನಾವಣೆ ನಡೆಯುತ್ತಿರುವುದು ಒಳ್ಳೆಯದೇ ನಾವು ನಿಮಗೆ ಮತ್ತೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒದಗಿಸಲು ಬಯಸುತ್ತೇವೆ. ಜೆ&ಕೆ ರಾಜ್ಯತ್ವವನ್ನು ನಿಮಗೆ ಮರಳಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ತನಿಖೆ ಬೇಕಾದ್ರೆ ಆಗಲಿ, ಸಿಎಂ ರಾಜೀನಾಮೆ ಕೊಡೋ ಅವಶ್ಯಕತೆ ಇಲ್ಲ: ಬೇಳೂರು ಗೋಪಾಲಕೃಷ್ಣ 

Share This Article