25ಲಕ್ಷ ರೂ.ಗೆ ನಟಿ ತ್ರಿಶಾರನ್ನು ಒಪ್ಪಿಸಿದ್ದರು ಆ ಶಾಸಕರು: ನಾಲಿಗೆ ಹರಿಬಿಟ್ಟ ರಾಜು

Public TV
1 Min Read
trisha actress 3

ಪದೇ ಪದೇ ನಟಿ ತ್ರಿಶಾ (Trisha) ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳು ನಾಡಿನಲ್ಲಿ ನಡೆಯುತ್ತಿದೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ  ಎ.ವಿ.ರಾಜು (A.V. Raju)ನಾಲಿಗೆ ಹರಿಬಿಟ್ಟಿದ್ದಾರೆ.

ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ (A. Venkatachalam) ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಶಾಸಕರೊಬ್ಬರು ಅದಕ್ಕೆ ಒಪ್ಪಿಸಿದ್ದರು ಎಂದು ರಾಜು ಹೇಳಿದ್ದಾರೆ. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದಂತೆಯೇ ಇದ್ದಕ್ಕೆ ನಟಿ ತ್ರಿಶಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚಾರಕ್ಕಾಗಿ ಹೀಗೆ ನಾಲಿಗೆ ಹರಿಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಲೀಗಲ್ ಟೀಮ್ ತಕ್ಕ ಪಾಠ ಕಲಿಸೋಕೆ ಸಜ್ಜಾಗಿದೆ ಎಂದು ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 

ಪ್ರಚಾರಕ್ಕಾಗಿ ಇಂತ ಕೀಳು ಮಟ್ಟದ ವ್ಯಕ್ತಿಗಳನ್ನು ಎದುರುಗೊಳ್ಳೋಕೆ ಅಸಹ್ಯವಾಗುತ್ತಿದೆ. ಇದನ್ನು ಎಂದಿಗೂ ಸಹಿಸಲ್ಲ ಮತ್ತು ಸುಮ್ಮನೆ ಕೂರುವುದಿಲ್ಲ. ನನ್ನ ಲೀಗಲ್ ಟೀಮ್ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Share This Article