ಉಡುಪಿ: ನಕ್ಸಲ್ ಚಳುವಳಿಯಲ್ಲಿ ಸಕ್ರಿಯವಾಗಿದ್ದ ತೊಂಬಟ್ಟು ಲಕ್ಷ್ಮೀ (Naxal Laksmi) ಅಂತಿಮವಾಗಿ ಡಿಸಿ ಕಚೇರಿಯಲ್ಲಿ ಶರಣಾಗಿದ್ದಾಳೆ.
ಶರಣಾಗತಿಗೆ ಸಂಬಂಧಿಸಿದಂತೆ ಭಾನುವಾರ ಉಡುಪಿ (Udupi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಲಕ್ಷ್ಮೀ ತೊಂಬಟ್ಟು ಆಗಮಿಸಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದಳು.
Advertisement
Advertisement
ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ್ ಜೊತೆ ನಕ್ಸಲ್ ಲಕ್ಷ್ಮಿ, ಎಸ್‌ಪಿ ಕಚೇರಿಗೆ ಆಗಮಿಸಿದಳು. ಅಲ್ಲಿ ಶರಣಾಗತಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಭದ್ರತೆಯೊಂದಿಗೆ ಡಿಸಿ ಕಚೇರಿಗೆ ಲಕ್ಷ್ಮಿಯನ್ನು ಪೊಲೀಸರು ಕರೆದೊಯ್ದರು. ಶರಣಾದ ನಕ್ಸಲ್ ಜೊತೆ ಆಕೆಯ ಸಹೋದರ ಮತ್ತು ಬಂಧುಗಳು ಹಾಜರಿದ್ದರು.
Advertisement
ಅಂತಿಮವಾಗಿ ಡಿಸಿ ಕಚೇರಿಯಲ್ಲಿ ಶರಣಾಗತಿ ಪಕ್ರಿಯೆ ಪೂರ್ಣಗೊಳಿಸಲಾಯಿತು.
Advertisement
‘ಎ’ ಕೆಟಗರಿ ಅನ್ವಯ ಪರಿಹಾರ ನೀಡುವುದಾಗಿ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಆರೋಗ್ಯ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಶರಣಾದ ನಕ್ಸಲ್ ಲಕ್ಷ್ಮೀ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಮೂರು ಪ್ರಕರಣ ಇದೆ. 2007ರಲ್ಲಿ ಗುಂಡಿನ ದಾಳಿ ನಡೆಸಿದ ಪ್ರಕರಣ, ಹಲ್ಲೆ ಮಾಡಿ ಬೆದರಿಕೆ ಹಾಕಿದ ಪ್ರಕರಣ, ಕರಪತ್ರಗಳನ್ನು ಅಂಟಿಸಿದ ಪ್ರಕರಣಗಳಿಗೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ರಾಜ್ಯ ಸರ್ಕಾರದ ಆದೇಶದ ಪ್ರಕಾರ ಸರಂಡರ್ ಪ್ಯಾಕೇಜ್ ನೀಡಲಾಗುವುದು. ಮೂರು ಕೆಟಗರಿಯಲ್ಲಿ ಸರಂಡರ್ ಪ್ಯಾಕೇಜ್ ಇದೆ. ನಮ್ಮ ರಾಜ್ಯದ ನಿವಾಸಿಗಳಾಗಿದ್ದರೆ ‘ಎ’ ಕೆಟಗರಿ. ಇವರು ಇದೇ ಕೆಟಗರಿಗೆ ಬರುತ್ತಾರೆ ಎಂಬುದನ್ನು ಗಮನಿಸಿ ಶಿಫಾರಸು ಮಾಡಿದ್ದೇವೆ. ಪುನರ್ವಸತಿ, ತರಬೇತಿ ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಈಕೆಯನ್ನು ‘ಎ’ ಕೆಟಗರಿಯಲ್ಲಿ ಪರಿಗಣಿಸಲಾಗುವುದು. ಆಕೆ ಹೇಳಿರುವ ಊರಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.