ಬೆಂಗಳೂರಿನ ಕೋರ್ಟ್ ನೀಡಿದ ಅನುಮತಿಯಿಂದಾಗಿ ಈ ಬಾರಿಯೂ ದರ್ಶನ್ (Darshan) ಮಕರ ಸಂಕ್ರಾತಿ (Makar Sankranti 2025) ಹಬ್ಬವನ್ನು ಮೈಸೂರಿನಲ್ಲಿ ಆಚರಿಸಲಿದ್ದಾರೆ. ಇದನ್ನೂ ಓದಿ:ನಿರ್ದೇಶಕರ ಬಳಿ ಕ್ಷಮೆ ಕೋರಿದ ರಶ್ಮಿಕಾ ಮಂದಣ್ಣ
ಪ್ರತಿ ವರ್ಷವೂ ಸಂಕ್ರಾಂತಿಯನ್ನು ದರ್ಶನ್ ಅದ್ಧೂರಿಯಾಗಿ ಆಚರಿಸುತ್ತಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹಸುಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುತ್ತಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಜೊತೆಗೆ ಸಡಗರದಿಂದಲೇ ಸಂಕ್ರಾಂತಿಯನ್ನು ಬರಮಾಡಿಕೊಳ್ಳುತ್ತಾರೆ. ಅದರಂತೆ ಈ ವರ್ಷವೂ ಕೂಡ ಹಬ್ಬ ಆಚರಿಸಲು ದರ್ಶನ್ ಮನೆಯಲ್ಲಿ ಭರ್ಜರಿ ತಯಾರಿ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಆರೋಪಿಯಾಗಿದ್ದರಿಂದ ಮತ್ತು ಬೆಂಗಳೂರು ಬಿಟ್ಟು ತೆರಳಬಾರದು ಅಂತ ಕೋರ್ಟ್ ಆದೇಶ ಇರುವುದರಿಂದ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಎಲ್ಲಿ ಆಚರಿಸುತ್ತಾರೆ ಎಂಬ ಕುತೂಹಲ ಇತ್ತು.
ಬೆಂಗಳೂರು ಕೋರ್ಟ್ ಜನವರಿ 12ರಿಂದ 17ರವೆಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿರುವುದರಿಂದ ಮೈಸೂರಿನಲ್ಲಿ ನಟ ಹಬ್ಬ ಆಚರಿಸಲಿದ್ದಾರೆ. ಈ ಬಾರಿಯೂ ಹಸು, ಕುದುರೆ, ಕುರಿ ಹಾಗೂ ಮತ್ತಿತರ ಪ್ರಾಣಿಗಳನ್ನು ಸಿಂಗರಿಸಿ ಕುಟುಂಬದೊಡನೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಿದ್ದಾರೆ.
ಮೈಸೂರಿಗೆ ದರ್ಶನ್ ತೆರಳಲು ಮತ್ತು ಪವಿತ್ರಾ ಗೌಡಗೆ ಹೊರ ರಾಜ್ಯಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿದೆ. 57ನೇ ಸಿಸಿಹೆಚ್ ನ್ಯಾಯಾಧೀಶರ ಮುಂದೆ ದರ್ಶನ್ ಪರ ವಕೀಲರು ಮೈಸೂರಿಗೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.
ಪವಿತ್ರಾ ಗೌಡ ಪರ ವಕೀಲರು ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಈ ಎರಡು ಅರ್ಜಿಗಳನ್ನು ಕೋರ್ಟ್ ಮಾನ್ಯ ಮಾಡಿದೆ. ದರ್ಶನ್‌ಗೆ ಜ.12ರಿಂದ 17ರವರೆಗೆ ಮೈಸೂರಿನಲ್ಲಿ ತಂಗಲು ಅನುಮತಿ ನೀಡಿದೆ.
ಕೋರ್ಟ್ ಮುಂಬೈ ಮತ್ತು ದೆಹಲಿಗೆ ತೆರಳಲು ಪವಿತ್ರಾ ಗೌಡಗೆ ಅನುಮತಿ ನೀಡಿದೆ. ದೇವಸ್ಥಾನ ಮತ್ತು ವ್ಯವಹಾರ ಸಂಬಂಧ ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೇಳಿದ್ದರು. ಆರ್‌ಆರ್ ನಗರದಲ್ಲಿ ಇರುವ ರೆಡ್ ಕಾರ್ಪೆಟ್ ಶೋ ರೂಂಗೆ ಸಂಬಂಧಿಸಿದಂತೆ ವಸ್ತುಗಳನ್ನು ತರಲು ಅವಕಾಶ ನೀಡುವಂತೆ ಪವಿತ್ರಾ ಗೌಡ ಅರ್ಜಿಯಲ್ಲಿ ಮನವಿ ಮಾಡಿದ್ದರು.
ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್ ಡಿ.13ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.







