ಚಾಮರಾಜನಗರ: ಬಂಡೀಪುರದಲ್ಲಿ ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಡಿಸೆಂಬರ್ 31 ಹಾಗೂ ಜನವರಿ 1 ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯವನ್ನು ನಿಷೇಧಿಸಲಾಗಿದೆ.
Advertisement
ಪ್ರತಿವರ್ಷ ವರ್ಷದ ಕೊನೆ ದಿನ ಇಲ್ಲಿಗೆ ಅಸಂಖ್ಯಾತ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಈ ವರ್ಷ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ. ಪ್ರವಾಸಿಗರು ಹೊಸ ವರ್ಷಾರಣೆಗೆ ಕೆಲದಿನಗಳ ಮುಂಚೆಯೇ ಇಲ್ಲಿನ ಅರಣ್ಯ ಇಲಾಖೆಯ ಕಾಟೇಜ್‍ಗಳು ಹಾಗೂ ಡಾರ್ಮೆಟರಿಗಳನ್ನು ಆನ್‍ಲೈನ್ ಮೂಲಕ ಬುಕ್ ಮಾಡುತ್ತಿದ್ದರು. ಆದರೆ ಈ ಬಾರಿ ಡಿಸೆಂಬರ್ 31 ಹಾಗು ಜನವರಿ 1ಕ್ಕೆ ಆನ್ ಲೈನ್ ಮೂಲಕ ಬುಕ್ ಮಾಡುವುದನ್ನು ಬ್ಲಾಕ್ ಮಾಡಲಾಗಿದೆ. ಇದನ್ನೂ ಓದಿ: ರಕ್ಷಿಸಬೇಕಾದ ಆರಕ್ಷಕನೇ ಕಳ್ಳನಾದ – ಬೈಕ್ ಕಳ್ಳತನ ಮಾಡಿಸ್ತಿದ್ದ ಕಾನ್‍ಸ್ಟೇಬಲ್ ಅರೆಸ್ಟ್
Advertisement
Advertisement
ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ. ಪ್ರವಾಸಿಗರು ಇಲ್ಲಿಗೆ ಬಂದು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆದರೆ ವಾಸ್ತವ್ಯ ಮಾಡುವಂತಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಮೀಟರ್ ಬಡ್ಡಿ ದಂಧೆಗೆ ಮಹಿಳೆ ಬಲಿ – ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ