ಮಡಿಕೇರಿ: ಈ ವರ್ಷವು ನಾಡಿನಾದ್ಯಂತ ಹೆಚ್ಚು ಮಳೆಯಾಗುತ್ತದೆ. ಜೊತೆಗೆ ರೋಗ ರುಜಿನಗಳು ಹೆಚ್ಚುತ್ತದೆ ಎಂದು ಅರಸೀಕೆರೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣದ ಗ್ರಾಮ ದೇವರ ಉತ್ಸವದಲ್ಲಿ ಭಾಗಿಯಾಗಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ರಾಜಕೀಯ ಬೆಳವಣಿಗೆಗಳ ಕುರಿತು ನಾನು ಮಾತನಾಡುವ ಹಾಗಿಲ್ಲ. ಏಕೆಂದರೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಶ್ರೀಗಳು ಹೇಳಿದರು.
Advertisement
Advertisement
ಕಳೆದ ವರ್ಷ ಇದೇ ಗ್ರಾಮ ದೇವರ ಉತ್ಸವಕ್ಕೆ ಧಾವಿಸಿದ್ದಾಗ ಈ ಬಾರಿ ಜಲಪ್ರಳಯ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ಕೊಡಗಿನಲ್ಲಿ ಜಲಪ್ರಳಯ ಆಗಿತ್ತು. ನಂಜುಂಡೇಶ್ವರ ದೇವರನ್ನು ನಂಬಿ ನಿಮಗೇನು ಆಗಲ್ಲ ಎಂದಿದ್ದೆ. ಅದಕ್ಕೆ ಈ ಭಾಗಕ್ಕೆ ಏನೂ ಹಾನಿಯಾಗಿಲ್ಲ ಬಿಡಿ ಎಂದು ಶ್ರೀಗಳು ಹೇಳಿದರು.